ಕೆಎಸ್‌ಸಿಎ ಕ್ರಿಕೆಟ್: ರಿಯಾಜ್ ಶತಕ, ಡಾಲ್ಫಿನ್ ಕ್ರಿಕೆಟರ್ಸ್‌ಗೆ ಜಯ

0

ಬೆಂಗಳೂರು, ಸೆಪ್ಟೆಂಬರ್ 23: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರಿಯಾಜ್ ಅವರ ಸ್ಫೋಟಕ ಶತಕದ ನೆರವಿನಿಂದ ಡಾಲ್ಫಿನ್ ಕ್ರಿಕೆಟರ್ಸ್ ತಂಡ, ಮೆಟ್ರೊ ಶೀಲ್ಡ್ ಕಪ್ ಕೆಎಸ್‌ಸಿಎ ಲೀಗ್ ಕಂ ನಾಕೌಟ್ ಟೂರ್ನಿಯಲ್ಲಿ ಜೈದುರ್ ಕ್ರಿಕೆಟರ್ಸ್ ವಿರುದ್ಧ 90 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.
ಇಲ್ಲಿನ ಜೆಎಸ್‌ಎಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡಾಲ್ಫಿನ್ ಕ್ರಿಕೆಟರ್ಸ್, ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. ಅಬ್ಬರದ ಶತಕ ಬಾರಿಸಿದ ರಿಯಾಜ್ 103 ಎಸೆತಗಳಲ್ಲಿ 10 ಬೌಂಡರಿ ಹಾಗೂ 11 ಸಿಕ್ಸರ್‌ಗಳನ್ನೊಳಗೊಂಡ ಅಜೇಯ 160 ರನ್ ಸಿಡಿಸಿದರು. ಆರಂಭಿಕ ಬ್ಯಾಟ್ಸ್‌ಮನ್ ಪ್ರತಾಪ್ 15 ಎಸೆತಗಳಲ್ಲಿ 30 ರನ್ ಹಾಗೂ ಹರ್ಷ್ ಕುಮಾರ್ 62 ರನ್ ಗಳಿಸಿದರು.
ನಂತರ ಕಠಿಣ ಗುರಿ ಬೆನ್ನಟ್ಟಿದ ಜೈದುರ್ ಕ್ರಿಕೆಟರ್ಸ್ 44.1 ಓವರ್‌ಗಳಲ್ಲಿ 267 ರನ್‌ಗಳಿಗೆ ಆಲೌಟಾಯಿತು.

Brief score
Dolphin Cricketers: 357/8 in 50 overs
Jaidur Cricketers: 267 all out in 44.1 overs

LEAVE A REPLY

Please enter your comment!
Please enter your name here

7 − one =