ಕೆಪಿಎಲ್: ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಬುಲ್ಸ್‌ಗೆ ಜಯ ತಂದ ನಾಗಾ ಭರತ್

0
Naga Bharath

ಮೈಸೂರು ಆಗಸ್ಟ್ 26: ತಮಿಳುನಾಡಿನ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಟಿ20 ಸರಣಿಯ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲ್ಲಲು ಕೊನೆಯ ಎಸೆತದಲ್ಲಿ 5 ರನ್ ಬೇಕಿದ್ದಾಗ ಸಿಕ್ಸರ್ ಸಿಡಿಸಿ ಭಾರತಕ್ಕೆ ಜಯ ತಂದು ಕೊಟ್ಟ ಕ್ಷಣ ಕ್ರಿಕೆಟ್ ಪ್ರಿಯರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಇದೀಗ ಕೆಪಿಎಲ್-7 ಟೂರ್ನಿಯಲ್ಲಿ ಬಿಜಾಪುರ ಬುಲ್ಸ್ ತಂಡದ ನಾಗಾ ಭರತ್ ಅಂಥದ್ದೇ ಸಾಹಸದ ಮೂಲಕ ತಂಡಕ್ಕೆ ಮೊದಲ ಗೆಲುವು ತಂದುಕೊಟ್ಟಿದ್ದಾರೆ.
ಎಸ್‌ಡಿಎನ್‌ಆರ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 2ನೇ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ವಿರುದ್ಧ ಗೆಲ್ಲಲು 153 ರನ್‌ಗಳ ಗುರಿ ಬೆನ್ನಟ್ಟಿದ ಬಿಜಾಪುರ ಬುಲ್ಸ್ ತಂಡ ಕೊನೆಯ ಎಸೆತದಲ್ಲಿ 6 ರನ್ ಗಳಿಸಬೇಕಿತ್ತು. ಸಿ.ಎ ಕಾರ್ತಿಕ್ ಎಸೆದ ಫುಲ್‌ಟಾಸ್ ಎಸೆತವನ್ನು ಫೈನ್‌ಲೆಗ್‌ನಲ್ಲಿ ಭರ್ಜರಿಯಾಗಿ ಸಿಕ್ಸರ್‌ಗಟ್ಟಿದ ನಾಗಾ ಭರತ್ ತಂಡಕ್ಕೆ ನಂಬಲಸಾಧ್ಯ ಗೆಲುವು ತಂದುಕೊಟ್ಟರು. ಆ ಎಸೆತ ನೋಬಾಲ್ ಕೂಡ ಆಗಿತ್ತು.
ಅಂತಿಮ ಓವರ್‌ನಲ್ಲಿ ಬಿಜಾಪುರ ಬುಲ್ಸ್ 9 ರನ್ ಗಳಿಸಬೇಕಿದ್ದಾಗ ಮೊದಲ ಐದು ಎಸೆತಗಳಲ್ಲಿ ಕಾರ್ತಿಕ್ ಕೇವಲ 3 ರನ್ ಬಿಟ್ಟುಕೊಟ್ಟು ತಂಡಕ್ಕೆ ಜಯದ ಆಸೆ ಚಿಗುರಿಸಿದ್ದರು. ಆದರೆ ಕೊನೆಯಲ್ಲಿ ನಾಗಾ ಭರತ್ ಅವರ ಸಾಹಸದಿಂದಾಗಿ ಬಳ್ಳಾರಿ ಟಸ್ಕರ್ಸ್ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. ಅಬ್ಬರದ ಆಟವಾಡಿದ ನಾಗಾ ಭರತ್ 46 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನೊಳಗೊಂಡ ಅಜೇಯ 72 ರನ್ ಬಾರಿಸಿ ಪಂದ್ಯಶ್ರೇಷ್ಠರಾಗಿ ಮೂಡಿ ಬಂದರು. ಬಿಜಾಪುರ ಬುಲ್ಸ್ ಪರ ಬೌಲಿಂಗ್‌ನಲ್ಲಿ ಮಿಂಚಿದ ಮಿಸ್ಟರಿ ಸ್ಪಿನ್ನರ್ ಕೆ.ಸಿ ಕಾರಿಯಪ್ಪ 4 ಓವರ್‌ಗಳಲ್ಲಿ ಕೇವಲ 11 ರನ್ನಿತ್ತು 3 ಪ್ರಮುಖ ವಿಕೆಟ್ ಉರುಳಿಸಿದರು.

KC Cariappa

LEAVE A REPLY

Please enter your comment!
Please enter your name here

5 × 4 =