ಕೆಪಿಎಲ್: ದಾವಣಗೆರೆ ಎಕ್ಸ್‌ಪ್ರೆಸ್ ವಿನಯ್ ಕುಮಾರ್ ವಿನೂತನ ದಾಖಲೆ

0
ಮೈಸೂರು, ಸೆಪ್ಟೆಂಬರ್ 3: ಕರ್ನಾಟಕ ತಂಡದ ನಾಯಕ, ಹುಬ್ಬಳ್ಳಿ ಟೈಗರ್ಸ್ ತಂಡದ ಸಾರಥಿ, ದಾವಣಗೆರೆ ಎಕ್ಸ್‌ಪ್ರೆಸ್ ಖ್ಯಾತಿಯ ಆರ್.ವಿನಯ್ ಕುಮಾರ್ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಇತಿಹಾಸದಲ್ಲಿ ಒಂದು ಸಾವಿರ ರನ್ ಹಾಗೂ 50 ವಿಕೆಟ್ ಪಡೆದ ಮೊದಲ ಆಟಗಾರನೆಂಬ ವಿನೂತನ ದಾಖಲೆ ಬರೆದಿದ್ದಾರೆ.
ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಬೆಳಗಾವಿ ಪ್ಯಾಂಥರ್ಸ್ ವಿರುದ್ಧದ ಪಂದ್ಯದಲ್ಲಿ ವಿನಯ್ ಕುಮಾರ್ ಈ ದಾಖಲೆ ಬರೆದರು. ಈ ಪಂದ್ಯದ ಅಂತ್ಯಕ್ಕೆ ಕೆಪಿಎಲ್‌ನಲ್ಲಿ ವಿನಯ್ 1004 ರನ್ ಗಳಿಸಿದ್ದು, 53 ವಿಕೆಟ್‌ಗಳನ್ನು ಪಡೆದಿದ್ದಾರೆ. ಕೆಪಿಎಲ್‌ನಲ್ಲಿ ವಿನಯ್ ಇದುವರೆಗೆ 48 ಪಂದ್ಯಗಳನ್ನಾಡಿದ್ದು, ಹುಬ್ಬಳ್ಳಿ ಟೈಗರ್ಸ್‌ಗೂ ಮುನ್ನ ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಪ್ರತಿನಿಸಿದ್ದರು.
ಅಂಕಿ ಅಂಶ ಮಾಹಿತಿ: ಎಚ್.ಆರ್ ಗೋಪಾಲಕೃಷ್ಣ, ಕ್ರಿಕೆಟ್ ಅಂಕಿಅಂಶ ತಜ್ಞರು

LEAVE A REPLY

Please enter your comment!
Please enter your name here

10 + three =