ಕೆಪಿಎಲ್: ಬ್ಲಾಸ್ಟರ್ಸ್ ಪಡೆಯನ್ನು ಫೈನಲ್‌ಗೆ ಮುನ್ನಡೆಸಿದ ಬರ್ತ್‌ಡೇ ಬಾಯ್ ಶ್ರೇಯಸ್

0
ಮೈಸೂರು, ಸೆಪ್ಟೆಂಬರ್ 4: ಮಂಗಳವಾರ 25ನೇ ಹುಟ್ಟುಹಬ್ಬ ಆಚರಿಸಿಕೊಂಡ ಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್(3/13) ಅವರ ಮಾರಕ ಸ್ಪಿನ್ ದಾಳಿಯ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್ ತಂಡ, ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)-7 ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ. ಕಳೆದ ವರ್ಷ ಆರೂ ಪಂದ್ಯಗಳನ್ನು ಸೋತು ನಿರಾಸೆಗೊಳಗಾಗಿದ್ದ ಬ್ಲಾಸ್ಟರ್ಸ್, ಈ ಬಾರಿ ಅಜೇಯವಾಗಿ ಫೈನಲ್ ತಲುಪಿದೆ.

Shreyas Gopal

ಇಲ್ಲಿನ ಎಸ್‌ಡಿಎನ್‌ಆರ್ ಮೈದಾನದಲ್ಲಿ ಮಂಗಳವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ರಾಬಿನ್ ಉತ್ತಪ್ಪ ನಾಯಕತ್ವದ ಬೆಂಗಳೂರು ಬ್ಲಾಸ್ಟರ್ಸ್ ತಂಡ, ಜೆ.ಸುಚಿತ್ ನಾಯಕತ್ವದ ಆತಿಥೇಯ ಮೈಸೂರು ವಾರಿಯರ್ಸ್ ವಿರುದ್ಧ 20 ರನ್‌ಗಳ ರೋಚಕ ಜಯ ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬೆಂಗಳೂರು ಬ್ಲಾಸ್ಚರ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 138 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಮೈಸೂರು ವಾರಿಯರ್ಸ್, ಶ್ರೇಯಸ್ ಗೋಪಾಲ್(3/13) ಮತ್ತು ಎಡಗೈ ಸ್ಪಿನ್ನರ್ ಆನಂದ್ ದೊಡ್ಡಮನಿ(2/16) ದಾಳಿಗೆ ತತ್ತರಿಸಿ 9 ವಿಕೆಟ್‌ಗೆ 118 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಶ್ರೇಯಸ್ ಮತ್ತು ಆನಂದ್ ತಮ್ಮ ನಡುವಿನ 7 ಓವರ್‌ಗಳಲ್ಲಿ ಕೇವಲ 29 ರನ್ ನೀಡಿ 5 ವಿಕೆಟ್ ಉರುಳಿಸಿ ಬೆಂಗಳೂರು ಬ್ಲಾಸ್ಟರ್ಸ್ ಫೈನಲ್ ತಲುಪಲು ಕಾರಣರಾದರು. ಬರ್ತ್‌ಡೇ ಬಾಯ್ ಶ್ರೇಯಸ್ ಗೋಪಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Brief scores: Bengaluru Blasters: 138/9 in 20 overs (Robin Uthappa 23, Manoj Bhandage 34; Prateek Jain 2-28, Kushal Wadhwani 3-25, J Suchith 2-12) bt Mysuru Warriors: 118/9 in 20 overs (Arjun Hoysala 52; Anand Doddamani 2-16, Shreyas Gopal 3-13) by 20 runs.

LEAVE A REPLY

Please enter your comment!
Please enter your name here

19 − 16 =