ಕೆಪಿಎಲ್-7: ಟೈಗರ್ಸ್ ಬೇಟೆಯಾಡಿ ಫೈನಲ್ ತಲುಪಿದ ಬುಲ್ಸ್

0
Bharat Chipli

ಮೈಸೂರು, ಸೆಪ್ಟೆಂಬರ್ 5: ನಾಯಕ ಭರತ್ ಚಿಪ್ಲಿ(73) ಮತ್ತು ಆಲ್ರೌಂಡರ್ ಎಂ.ಜಿ ನವೀನ್(ಅಜೇಯ 62) ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ಮಾಜಿ ಚಾಂಪಿಯನ್ ಬಿಜಾಪುರ ಬುಲ್ಸ್ ತಂಡ, ಕೆಪಿಎಲ್-7 ಟೂರ್ನಿಯಲ್ಲಿ ಹುಬ್ಬಳ್ಳಿ ಟೈಗರ್ಸ್‌ಗೆ ಸೋಲುಣಿಸಿ ಫೈನಲ್ ತಲುಪಿದೆ.
ಇಲ್ಲಿನ ಎಸ್‌ಡಿಎನ್‌ಆರ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಬಿಜಾಪುರ ಬುಲ್ಸ್ ತಂಡ ಹುಬ್ಬಳ್ಳಿ ಟೈಗರ್ಸ್ ತಂಡವನ್ನು 9 ವಿಕೆಟ್‌ಗಳಿಂದ ಸದೆ ಬಡಿಯಿತು. ಗುರುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಬಿಜಾಪುರ್ ಬುಲ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ಪ್ರಶಸ್ತಿಗಾಗಿ ಸೆಣಸಾಡಲಿವೆ.

ಎಂ.ಜಿ ನವೀನ್

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 134 ರನ್‌ಗಳ ಸಾಧಾರಣ ಮೊತ್ತ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಬಿಜಾಪುರ ಬುಲ್ಸ್ 14.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿ ಸುಲಭ ಜಯ ದಾಖಲಿಸಿತು. ಭರತ್ ಚಿಪ್ಲಿ 46 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ 73 ರನ್ ಸಿಡಿಸಿದರೆ, ಎಂ.ಜಿ ನವೀನ್ 43 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ ಅಜೇಯ 62 ರನ್ ಗಳಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 125 ರನ್ ಸೇರಿಸಿ ತಂಡದ ಗೆಲುವನ್ನು ಸುಲಭಗೊಳಿಸಿದರು.

Brief scores: Hubli Tigers 134/7 in 20 overs (Mohd Taha 24, Abhishek Reddy 42, Kranthi Kumar 24 n.o.; Naveen MG 2-36, KP Appanna 2-28) bt Bijapur Bulls: 136/1 in 14.5 overs (Bharath Chipli 73, MG Naveen 62 n.o.) by 9 wickets.

Final – Bengaluru Blasters vs Bijapur Bulls – 6.40 pm.

SDNR Wadiyar Stadium, Mysuru.

Live on Star Sports 2, Star Sports 2 HD and Hotstar

LEAVE A REPLY

Please enter your comment!
Please enter your name here

3 × 4 =