ಕೆಪಿಎಲ್-7 ಬ್ಲಾಸ್ಟರ್ಸ್‌ಗೆ ಫೈನಲ್ ಶಾಕ್, ಬಿಜಾಪುರ ಬುಲ್ಸ್ ಚಾಂಪಿಯನ್

0

ಮೈಸೂರು, ಸೆಪ್ಟೆಂಬರ್ 6: ಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿದ ಬಿಜಾಪುರ ಬುಲ್ಸ್ ತಂಡ, ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)-7ನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಈ ಮೂಲಕ ಬಿಜಾಪುರ ಬುಲ್ಸ್ ತಂಡ ಎರಡು ಬಾರಿ ಪ್ರಶಸ್ತಿ ಗೆದ್ದಂತಾಗಿದೆ. 2015ರಲ್ಲಿ ಬುಲ್ಸ್ ಬಳಗದ ಕೆಪಿಎಲ್‌ನಲ್ಲಿ ಮೊದಲ ಬಾರಿ ಚಾಂಪಿಯನ್ ಆಗಿತ್ತು.
ಇಲ್ಲಿನ ಎಸ್‌ಡಿಎನ್‌ಆರ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ, ಬ್ಯಾಟಿಂಗ್ ವೈಫಲ್ಯ ಅನುಭವಿಸಿ 20 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲೌಟಾಯಿತು. ಎಡಗೈ ಸ್ಪಿನ್ನರ್ ಕೆ.ಪಿ ಅಪ್ಪಣ್ಣ(3/16) ಮತ್ತು ಆಲ್‌ರೌಂಡರ್ ಎಂ.ಜಿ ನವೀನ್(2/19) ಬುಲ್ಸ್ ಪರ ಬೌಲಿಂಗ್‌ನಲ್ಲಿ ಮಿಂಚಿದರು.
ನಂತರ ಸುಲಭ ಗುರಿ ಬೆನ್ನಟ್ಟಿದ ಬಿಜಾಪುರ ಬುಲ್ಸ್ ತಂಡ 13.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿ ಚಾಂಪಿಯನ್ ಪಟ್ಟಕ್ಕೇರಿತು. ಲೀಗ್ ಹಂತದಲ್ಲಿ ಅಮೋಘ ಪ್ರದರ್ಶನವಿತ್ತು ಅಜೇಯವಾಗಿ ಫೈನಲ್ ತಲುಪಿದ್ದ ಬೆಂಗಳೂರು ಬ್ಲಾಸ್ಟರ್ಸ್ ತಂಡ, ಫೈನಲ್‌ನಲ್ಲಿ ಸೋಲುವ ಮೂಲಕ ನಿರಾಸೆ ಅನುಭವಿಸಿತು.

Brief scores: Bengaluru Blasters: 101 all out in 20 overs (KB Pawan 22; Bhavesh Gulecha 2-14, MG Naveen 2-19, KP Appanna 3-16) lost to Bijapur Bulls: 106/3 in 13.5 overs (MG Naveen 43) by 7 wickets.

LEAVE A REPLY

Please enter your comment!
Please enter your name here

one × 5 =