ಕೆಸಿಸಿ ಉದ್ಘಾಟನೆಗೆ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದ ಕಿಚ್ಚ ಸುದೀಪ್

0

ಬೆಂಗಳೂರು, ಸೆಪ್ಟೆಂಬರ್ 4: ಮೊದಲ ಆವೃತ್ತಿಯಲ್ಲೇ ಭಾರೀ ಸದ್ದು ಮಾಡಿ ಯಶಸ್ವಿಯಾಗಿರುವ ಕನ್ನಡ ಚಲನಚಿತ್ರ
ಕಪ್(ಕೆಸಿಸಿ)-2 ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ಸೆಪ್ಟೆಂಬರ್ 8 ಹಾಗೂ 9ರಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ
ಪಂದ್ಯಗಳು ನಡೆಯಲಿವೆ.
ಕೆಸಿಸಿ ಸೂತ್ರಧಾರ ನಟ ಕಿಚ್ಚ ಸುದೀಪ್ 2ನೇ ಆವೃತ್ತಿಯ ಟೂರ್ನಿಯನ್ನು ಅದ್ದೂರಿಯಾಗಿ ನಡೆಸುತ್ತಿದ್ದು, ಸೆಪ್ಟೆಂಬರ್
8ರಂದು ನಡೆಯಲಿರುವ ಟೂರ್ನಿಯ ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರನ್ನು
ಆಹ್ವಾನಿಸಿದ್ದಾರೆ.


ಸೋಮವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸುದೀಪ್, ಕೆಸಿಸಿ-2 ಟೂರ್ನಿಯ ಉದ್ಘಾಟನೆಗೆ ಆಗಮಿಸುವಂತೆ
ಮನವಿ ಮಾಡಿದರು. ಉದ್ಘಾಟನಾ ಸಮಾರಂಭ ಶನಿವಾರ ಮಧ್ಯಾಹ್ನ 12 ಗಂಟೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ
ನಡೆಯಲಿದ್ದು, ನಂತರ ಪಂದ್ಯಗಳು ಆರಂಭವಾಗಲಿವೆ. ಎರಡು ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು ಆರು
ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.
ಕನ್ನಡದ ಸ್ಟಾರ್ ನಟರಾದ ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ಉಪೇಂದ್ರ, ಪುನೀತ್ ರಾಜ್‌ಕುಮಾರ್, ಯಶ್ ಹಾಗೂ
ಗಣೇಶ್ ಅವರೊಂದಿಗೆ ಈ ಬಾರಿ ಅಂತರಾಷ್ಟ್ರೀಯ ಕ್ರಿಕೆಟ್‌ನ ದಿಗ್ಗಜ ಆಟಗಾರರು ಆಡಲಿರುವುದು ವಿಶೇಷ. ಭಾರತದ
ವೀರೇಂದ್ರ ಸೆಹ್ವಾಗ್, ಆಸ್ಟ್ರೇಲಿಯಾದ ಆ್ಯಡಂ ಗಿಲ್‌ಕ್ರಿಸ್ಟ್, ಲ್ಯಾನ್ಸ್ ಕ್ಲೂಸ್ನೆರ್, ಹರ್ಷಲ್ ಗಿಬ್ಸ್, ಶ್ರೀಲಂಕಾದ ತಿಲಕರತ್ನೆ
ದಿಲ್ಶಾನ್ ಮತ್ತು ಇಂಗ್ಲೆಂಡ್‌ನ ಓವೈಸ್ ಶಾ ಈ ಬಾರಿ ಆಡಲಿದ್ದಾರೆ.

LEAVE A REPLY

Please enter your comment!
Please enter your name here

eight − four =