ಕೆಸಿಸಿ ಕ್ರಿಕೆಟ್ ಲೀಗ್ : ಬೌಂಡರಿ, ಸಿಕ್ಸರ್ಸ್ ಬಾರಿಸಲು ವೀರೂ, ಗಿಲ್ಲಿ ರೆಡಿ

0

ಬೆಂಗಳೂರು, ಆಗಸ್ಟ್ 27: ಕಿಚ್ಚ ಸುದೀಪ್ ಅವರ ಕನಸಿನ ಕೂಸು ಕರ್ನಾಟಕ ಚಲನಚಿತ್ರ ಕಪ್ (ಕೆಸಿಸಿ) ಸೀಸನ್-2 ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಸೆಪ್ಟೆಂಬರ್ 8 ಮತ್ತು 9ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದ್ದು, 6 ತಂಡಗಳು ಭಾಗವಹಿಸಲಿವೆ.
ಅಂತರಾಷ್ಟ್ರೀಯ ಆಟಗಾರರಾದ ವೀರೇಂದ್ರ ಸೆಹ್ವಾಗ್, ಆ್ಯಡಂ ಗಿಲ್‌ಕ್ರಿಸ್ಟ್, ಓವೈಸ್ ಶಾ, ಹರ್ಷಲ್ ಗಿಬ್ಸ್, ಲ್ಯಾನ್ಸ್ ಕ್ಲೂಸ್ನೆರ್ ಮತ್ತು ತಿಲಕರತ್ನೆ ದಿಲ್ಶಾನ್ ಈ ಬಾರಿಯ ಟೂರ್ನಿಯಲ್ಲಿ ಆಡಲಿರುವುದು ವಿಶೇಷ. ಈ ಆರೂ ದಿಗ್ಗಜ ಫೋಟೋ ಶೂಟ್ ನಡೆದಿದ್ದು, ಕದಂಬ ಲಯನ್ಸ್ ಪರ ಆಡಲಿರುವ ಡೆಲ್ಲಿ ಡ್ಯಾಶರ್ ವೀರೇಂದ್ರ ಸೆಹ್ವಾಗ್, ಹಾಲಿ ಚಾಂಪಿಯನ್ ವಿಜಯನಗರ ಪೇಟ್ರಿಯೆಟ್ಸ್ ತಂಡದ ಪರ ಆಡಲಿರುವ ಆಸ್ಟ್ರೇಲಿಯಾದ ಆ್ಯಡಂ ಗಿಲ್‌ಕ್ರಿಸ್ಟ್, ರಾಷ್ಟ್ರಕೂಟ ಪ್ಯಾಂಥರ್ಸ್ ತಂಡದ ಪರ ಆಡಲಿರುವ ಇಂಗ್ಲೆಂಡ್‌ನ ಓವೈಸ್ ಶಾ, ಗಂಗಾ ವಾರಿಯರ್ಸ್ ಪರ ಬ್ಯಾಟ್ ಬೀಸಲಿರುವ ದಕ್ಷಿಣ ಆಫ್ರಿಕಾದ ಲ್ಯಾನ್ಸ್ ಕ್ಲೂಸ್ಲೆರ್, ಹೊಯ್ಸಳ ಈಗಲ್ಸ್ ಪರ ಆಡಲಿರುವ ಹರ್ಷಲ್ ಗಿಬ್ಸ್ ಮತ್ತು ಒಡೆಯರ್ ಚಾರ್ಜರ್ಸ್ ಪರ ಆಡಲಿರುವ ತಿಲಕರತ್ನೆ ದಿಲ್ಶಾನ್ ತಮ್ಮ ತಂಡಗಳ ಜರ್ಸಿ ತೊಟ್ಟಿರುವ ಫೋಟೋಗಳನ್ನು ಕಿಚ್ಚ ಸುದೀಪ್ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

LEAVE A REPLY

Please enter your comment!
Please enter your name here

eleven − 2 =