ಕೆಸಿಸಿ ಟೂರ್ನಿಗೆ ಭದ್ರತೆ ನೀಡಲು ಉಪ ಮುಖ್ಯಮಂತ್ರಿಗೆ ನಟ ಸುದೀಪ್ ಮನವಿ

0

ಬೆಂಗಳೂರು, ಸೆಪ್ಟೆಂಬರ್ 1: ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 8 ಮತ್ತು 9ರಂದು ನಡೆಯಲಿರುವ ಕನ್ನಡ ಚಲನಚಿತ್ರ ಕಪ್(ಕೆಸಿಸಿ) ಸೀಸನ್-2 ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಟೂರ್ನಿಯ ಸೂತ್ರಧಾರ, ನಟ ಕಿಚ್ಚ ಸುದೀಪ್ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರನ್ನು ಇಂದು ವಿಧಾನಸೌಧದಲ್ಲಿ ಭೇಟಿ ಮಾಡಿ ಟೂರ್ನಿಗೆ ಪೊಲೀಸ್ ಭದ್ರತೆ ಒದಗಿಸುವಂತೆ ಮನವಿ ಸಲ್ಲಿಸಿದರು.
ಸುದೀಪ್ ಅವರ ಮನವಿಯನ್ನು ಸ್ವೀಕರಿಸಿದ ಪರಮೇಶ್ವರ್, ಕೆಸಿಸಿ ಟೂರ್ನಿಗೆ ಬೇಕಾದ ಎಲ್ಲಾ ಭದ್ರತೆಯನ್ನು ನೀಡುವುದಾಗಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಟೂರ್ನಿಯಿಂದ ಬರುವ ಹಣದಿಂದ ಕೊಡಗಿನ ನೆರೆ ಪರಿಪಾರಕ್ಕೂ ನೆರವು ಕೊಡುವ ಕೆಸಿಸಿ ಆಡಳಿತ ಮಂಡಳಿಯ ನಿರ್ಧಾರ ತಮಗೆ ಖುಷಿ ಕೊಟ್ಟಿದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

15 − 1 =