ಕೆಸಿಸಿ-2 ಟಿ10: ಒಡೆಯರ್ ಚಾರ್ಜರ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ

0
Wodeyar Chargers pose after winning the title. PC: KCC
ಬೆಂಗಳೂರು, ಸೆಪ್ಟೆಂಬರ್ 10: ಶ್ರೀಲಂಕಾದ ದಿಗ್ಗಜ ಆಲ್ರೌಂಡರ್ ತಿಲಕರತ್ನೆ ದಿಲ್ಶಾನ್ ಅವರ ಅಮೋಘ ಆಲ್ರೌಂಡ್ (68 ರನ್ ಮತ್ತು 3 ವಿಕೆಟ್) ಆಟದಿಂದಾಗಿ ಒಡೆಯರ್ ಚಾರ್ಜರ್ಸ್ ತಂಡ ಕನ್ನಡ ಚಲನ ಚಿತ್ರ ಕಪ್(ಕೆಸಿಸಿ) 2ನೇ ಆವೃತ್ತಿಯ ಟಿ10 ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಪತ್ರಕರ್ತ ಸದಾಶಿವ ಶೆಣೈ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಮುಂದಾಳತ್ವದ ಒಡೆಯರ್ ಚಾರ್ಜರ್ಸ್ ತಂಡ, ರಾಕಿಂಗ್ ಸ್ಟಾರ್ ಯಶ್ ನಾಯಕತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿ ಮೊದಲ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಮೊದಲ ಆವೃತ್ತಿಯ ಟೂರ್ನಿಯಲ್ಲಿ ಒಡೆಯರ್ ಚಾರ್ಜರ್ಸ್ ತಂಡ ರನ್ನರ್ಸ್ ಅಪ್ ಆಗಿತ್ತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡ, ನಿಗದಿತ 10 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 122 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. ಇಂಗ್ಲೆಂಡ್ ಆಟಗಾರ ಓವೈಸ್ ಶಾ 11 ಎಸೆತಗಳಲ್ಲಿ ಸಿಡಿಲಬ್ಬರದ ಅಜೇಯ 42 ರನ್ ಸಿಡಿಸಿದರೆ, ಕೆಪಿಎಲ್ ಆಲ್‌ರೌಂಡರ್ ಸ್ಟಾಲಿನ್ ಹೂವರ್ 18 ಎಸೆತಗಳಲ್ಲಿ 33 ರನ್ ಸಿಡಿಸಿದರು. ಒಡೆಯರ್ ಚಾರ್ಜರ್ಸ್ ತಂಡದ ಪರ ಶ್ರೀಲಂಕಾದ ಮಾಜಿ ಆಲ್ರೌಂಡರ್ ತಿಲಕರತ್ನೆ ದಿಲ್ಶಾನ್ ಒಂದೇ ಓವರ್‌ನಲ್ಲಿ 3 ವಿಕೆಟ್ ಪಡೆದು ರಾಷ್ಟ್ರಕೂಟ ಪ್ಯಾಂಥರ್ಸ್‌ಗೆ ಬ್ರೇಕ್ ಹಾಕಿದರು.
ನಂತರ 123 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಒಡೆಯರ್ ಚಾರ್ಜರ್ಸ್ ತಂಡ, 10 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿ ರೋಚಕ ಗೆಲುವು ಪಡೆಯಿತು. ಬ್ಯಾಟಿಂಗ್‌ನಲ್ಲೂ ಅಬ್ಬರಿಸಿದ ದಿಲ್ಶಾನ್ 31 ಎಸೆತಗಳಲ್ಲಿ 12 ಬೌಂಡರಿ ಹಾಗೂ ಒಂದು ಸಿಕ್ಸರ್ ಒಳಗೊಂಡ 68 ರನ್ ಸಿಡಿಸಿ ಗೆಲುವಿನ ರೂವಾರಿಯಾದರು. ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಗೆಲುವಿಗೆ 2 ರನ್‌ಗಳು ಬೇಕಿದ್ದಾಗ ಲಾಂಗ್ ಆನ್‌ನಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿದ ಕೆಪಿಎಲ್ ಆಟಗಾರ ರಿತೇಶ್ ಭಟ್ಕಳ್ ಒಡೆಯರ್ ಚಾರ್ಜರ್ಸ್‌ಗೆ ಅಮೋಘ ಜಯ ತಂದುಕೊಟ್ಟರು. ಕಿಚ್ಚ ಸುದೀಪ್ ಹಾಗೂ ಡೆಲ್ಲಿ ಡ್ಯಾಶರ್ ವೀರೇಂದ್ರ ಸೆಹ್ವಾಗ್ ಮುಂದಾಳತ್ವದ ಕದಂಬ ಲಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲೂ ರಿತೇಶ್ ಭಟ್ಕಳ್ ಸತತ 2 ಸಿಕ್ಸರ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು.

ಫೈನಲ್ ಪಂದ್ಯವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Brief scores
Rashtrakoota Panthers: 122/8 in 10 overs (Stallin Hoover 33, Owais Shah 42*; Tilakaratne Dilshan 3/1, Ritesh Bhatkal 1/10, Petrol Prasanna 1/33, Pratap Narayan 1/17).
Odeyar Chargers: 127/4 in 10 overs (Tilakaratne Dilshan 68, CM Gautam 19, Ritesh Bhatkal 10*; Krishna 1/33).

LEAVE A REPLY

Please enter your comment!
Please enter your name here

sixteen + 12 =