ಕ್ಯಾನ್ಸರ್‌ನಿಂದ ಮೃತಪಟ್ಟ ಯುವ ಕ್ರಿಕೆಟಿಗ ಸನತ್ ನಾಯ್ಕ್

0

ಬೆಂಗಳೂರು, ಅಕ್ಟೋಬರ್ 1: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯ ಅಂಡರ್-16 ಹಾಗೂ ಅಂಡರ್-19 ಜೋನಲ್ಸ್ ಪಂದ್ಯಗಳನ್ನಾಡಿರುವ ಯುವ ಆಲ್ರೌಂಡರ್ ಸನತ್ ನಾಯ್ಕ್ ಕ್ಯಾನ್ಸರ್‌ನಿಂದಾಗಿ ಭಾನುವಾರ ಮೃತಪಟ್ಟಿದ್ದಾರೆ.
ಉದಯೋನ್ಮುಖ ಆಲ್ರೌಂಡರ್ ಆಗಿದ್ದ ಸನತ್ ಕಳೆದೊಂದು ವರ್ಷದಿಂದ ಕ್ಯಾನ್ಸರ್ ಪೀಡಿತರಾಗಿದ್ದರು. ಸೆಪ್ಟೆಂಬರ್ 6ರಂದು 21ನೇ ವರ್ಷಕ್ಕೆ ಕಾಲಿಟ್ಟಿದ್ದ ಸನತ್, ಕಳೆದ ಫೆಬ್ರವರಿಯಲ್ಲಿ ಮೆದುಳಿನ ಕ್ಯಾನ್ಸರ್‌ಗೆ ಗುರಿಯಾಗಿದ್ದರು. ನಂತರ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

ಬೆಂಗಳೂರಿನ ಜೈನ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಸನತ್ 2012ರಲ್ಲಿ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಪರ 14 ವರ್ಷದೊಳಗಿನವರ ಅಂತರ್ ಶಾಲಾ ಕ್ರಿಕೆಟ್ ಟೂರ್ನಿಯಲ್ಲಿ ಬೆಸ್ಟ್ ಬೌಲರ್ ಪ್ರಶಸ್ತಿ ಪಡೆದಿದ್ದರು.
ಎಡಗೈ ಬ್ಯಾಟ್ಸ್ಮನ್ ಮತ್ತು ಲೆಗ್‌ಸ್ಪಿನ್ನರ್ ಆಗಿದ್ದ ಸನತ್ ಕೆಎಸ್‌ಸಿಎ ಲೀಗ್ನ್‌ಲ್ಲಿ ಫ್ರೆಂಡ್ಸ್ ಯೂನಿಯನ್ ಕ್ರಿಕೆಟ್ ಕ್ಲಬ್(2) ಪರ ಆಡಿದ್ದರು.

LEAVE A REPLY

Please enter your comment!
Please enter your name here

1 × five =