ಕ್ರಿಕೆಟ್‌ನಲ್ಲಷ್ಟೇ ಅಲ್ಲ, Golfನಲ್ಲೂ ಕರುಣ್ ನಾಯರ್ ಬೆಸ್ಟ್

0

ಬೆಂಗಳೂರು, ಸೆಪ್ಟೆಂಬರ್ 23: ಕರ್ನಾಟಕದ ಕ್ರಿಕೆಟಿಗ, ಭಾರತ ಟೆಸ್ಟ್ ತಂಡದ ಆಟಗಾರ, ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ 2ನೇ ಭಾರತೀಯ ಆಟಗಾರನೆಂಬ ಖ್ಯಾತಿಯ ಕರುಣ್ ನಾಯರ್ ಕರ್ನಾಟಕ ಗಾಲ್ಫ್ ಹಬ್ಬದಲ್ಲಿ ಪಾಲ್ಗೊಂಡು ತಮ್ಮ ಗಾಲ್ಫ್ ಕೌಶಲ್ಯ ಮೆರೆದಿದ್ದಾರೆ.
ಕರ್ನಾಟಕ ಗಾಲ್ ಅಸೋಸಿಯೇಶನ್ ಆಶ್ರಯದಲ್ಲಿ ನಡೆಯುತ್ತಿರುವ ಕರ್ನಾಟಕ ಗಾಲ್ಫ್ ಹಬ್ಬದಲ್ಲಿ ಶನಿವಾರ ಪಾಲ್ಗೊಂಡ ಕರುಣ್ ನಾಯರ್ 275 ಯಾರ್ಡ್‌ಗಳ ದೂರದ 9ನೇ ನಂಬರ್ ಹೋಲ್‌ಗೆ ಗಾಲ್ ಚೆಂಡನ್ನು ಬೀಳಿಸುವಲ್ಲಿ ಯಶಸ್ವಿಯಾದರು. ಈ ವೇಳೆ ಮಾತನಾಡಿದ ಕರುಣ್ ನಾಯರ್, ‘‘ವೈಯಕ್ತಿಕ ವ್ಯಕ್ತಿತ್ವವನ್ನು ಉತ್ತಮ ಪಡಿಸಿಕೊಳ್ಳಲು ತಮಗೆ ಗಾಲ್ಫ್ ನೆರವಾಗಿದೆ. ತಂಡ ಆಧಾರಿತ ಕ್ರೀಡೆಗಳಲ್ಲಿ ಈ ಅವಕಾಶ ಕೆಲವೊಮ್ಮೆ ನಮಗೆ ಸಿಗುವುದಿಲ್ಲ,’’ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

1 × 1 =