ಕ್ರಿಕೆಟ್ ಜನಕರ ನಾಡಿನಲ್ಲಿ ಉದಯಿಸಿದ ಧೋನಿ ಉತ್ತರಾಧಿಕಾರಿ

0
Rishabh Pant PC: ICC/Twitter

ಲಂಡನ್, ಸೆಪ್ಟೆಂಬರ್ 11: ಮಹೇಂದ್ರ ಸಿಂಗ್ ಧೋನಿ ಅವರ ನಂತರ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಯಾರು ಎಂಬ ಪ್ರಶ್ನೆಗೆ ಕ್ರಿಕೆಟ್ ಜನಕರ ನಾಡಿನಲ್ಲಿ ಉತ್ತರ ಸಿಕ್ಕಿದೆ. ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಅಂತಿಮ ದಿನ ಡೆಲ್ಲಿ ಡ್ಯಾಶರ್ ರಿಷಭ್ ಪಂತ್ ವೀರಾವೇಶದ ಶತಕ ಸಿಡಿಸುವ ಮೂಲಕ ಮುಂದಿನ ದಿನಗಳಲ್ಲಿ ಧೋನಿ ಅವರ ಉತ್ತರಾಧಿಕಾರಿ ತಾವೇ ಎಂಬುದನ್ನು ಸಾಬೀತು ಪಡಿಸಿದ್ದಾರೆ.

PC: ICC/Twitter

ಕೆನ್ನಿಂಗ್ಟನ್ ಓವಲ್ ಮೈದಾನ ಮಂಗಳವಾರ ಎರಡು ಅದ್ಭುತ ಇನ್ನಿಂಗ್ಸ್‌ಗಳಿಗೆ ಸಾಕ್ಷಿಯಾಯಿತು. ಕನ್ನಡಿಗ ಕೆ.ಎಲ್ ರಾಹುಲ್ ಇಂಗ್ಲೆಂಡ್ ನೆಲದಲ್ಲಿ ಮೊದಲ ಹಾಗೂ ಟೆಸ್ಟ್ ವೃತ್ತಿಜೀವನದ 5ನೇ ಶತಕ ದಾಖಲಿಸಿದರೆ, ರಿಷಭ್ ಪಂತ್ ಚೊಚ್ಚಲ ಟೆಸ್ಟ್ ಶತಕದೊಂದಿಗೆ ಅಬ್ಬರಿಸಿದರು.
ಗೆಲುವಿಗೆ 464 ರನ್‌ಗಳ ಕಷ್ಟಕರ ಗುರಿ ಬೆನ್ನಟ್ಟುವ ವೇಳೆ ಭಾರತ ತಂಡ 121 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ರಾಹುಲ್‌ಗೆ ಸಾಥ್ ನೀಡಿದ ರಿಷಭ್ ಪಂತ್ 6ನೇ ವಿಕೆಟ್‌ಗೆ ಅಮೋಘ 204 ರನ್‌ಗಳ ಜೊತೆಯಾಟವಾಡಿ ತಂಡವನ್ನು ಆಧರಿಸಿದರು.
ಈ ವೇಳೆ ಸಿಕ್ಸರ್ ಬಾರಿಸಿ ಶತಕ ಪೂರ್ತಿಗೊಳಿಸಿದ ರಿಷಭ್ 146 ಎಸೆತಗಳಲ್ಲಿ 15 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 114 ರನ್ ಸಿಡಿಸಿ ಔಟಾದರು.
ರಾಹುಲ್(149) ಹಾಗೂ ರಿಷಭ್ ಪಂತ್(114) ವೀರಾವೇಶದ ಶತಕಗಳನ್ನು ದಾಖಲಿಸಿದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. 2ನೇ ಇನ್ನಿಂಗ್ಸ್‌ನಲ್ಲಿ 345 ರನ್‌ಗಳಿಗೆ ಆಲೌಟಾದ ಭಾರತ 118 ರನ್‌ಗಳಿಂದ ಸೋಲನುಭವಿಸಿ 1-4ರ ಅಂತರದಲ್ಲಿ ಸರಣಿಯನ್ನು ಆತಿಥೇಯರಿಗೆ ಒಪ್ಪಿಸಿತು.

Brief scores
England: 332 & 423/8d in 112.3 overs (Alastair Cook 147, Joe Root 125; Ravindra Jadeja 3/179, Hanuma Vihari 3/37).
India: 292 & 345 in 94.3 overs (KL Rahul 149, Rishabh Pant 114, Ajinkya Rahane 37; James Anderson 3/45, Sam Curran 2/23, Adil Rashid 2/63).

LEAVE A REPLY

Please enter your comment!
Please enter your name here

5 × four =