ಗುಡ್ ನ್ಯೂಸ್: ಫೆ.27ಕ್ಕೆ ಬೆಂಗಳೂರಲ್ಲಿ ಭಾರತ Vs ಆಸೀಸ್ ಟಿ20, KSCA ಮನವಿಗೆ BCCI ಗ್ರೀನ್ ಸಿಗ್ನಲ್..!

0

ಬೆಂಗಳೂರು, ಫೆಬ್ರವರಿ 2: ಕರ್ನಾಟಕದ ಕ್ರಿಕೆಟ್ ಪ್ರಿಯರಿಗೆ ಬಿಸಿಸಿಐ ಶುಭ ಸುದ್ದಿ ಕೊಟ್ಟಿದೆ. ಆತಿಥ್ಯ ಕೈತಪ್ಪುವ ಭೀತಿಯಲ್ಲಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯ ಎಂ,ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಯಲಿದೆ. ಆದರೆ ಒಂದೇ ಒಂದು ಬದಲಾವರಣೆ ಅಂದ್ರೆ ಫೆಬ್ರವರಿ 24ಕ್ಕೆ ಬದಲಾಗಿ ಪಂದ್ಯ ಫೆಬ್ರವರಿ 27ರಂದು ನಡೆಯಲಿದೆ.
ಆಸೀಸ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯಕ್ಕೆ ವೇಳಾಪಟ್ಟಿಯ ಪ್ರಕಾರ ಫೆಬ್ರವರಿ 24ರಂದು ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಬೇಕಿತ್ತು. ಆದರೆ ಫೆಬ್ರವರಿ 24ರಂದು ಬೆಂಗಳೂರಿನಲ್ಲಿ ಏರೋ ಶೋ ನಡೆಯಲಿರುವ ಕಾರಣ ಭದ್ರತಾ ಕಾರಣಗಳಿಂದಾಗಿ ಪಂದ್ಯದ ದಿನಾಂಕವನ್ನು ಬದಲಿಸುವಂತೆ ನಗರ ಪೊಲೀಸ್ ಆಯುಕ್ತರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಮನವಿ ಮಾಡಿದ್ದರು.
ಹೀಗಾಗಿ ಪಂದ್ಯವನ್ನು ಫೆಬ್ರವರಿ 27ರಂದು ನಡೆಸುವಂತೆ ಬಿಸಿಸಿಐಗೆ ರಾಜ್ಯ ಕ್ರಿಕೆಟ್ ಸಂಸ್ಥೆ ಮನವಿ ಮಾಡಿತ್ತು. ಇದು ಸಾಧ್ಯವಾಗದೆ ಪಂದ್ಯ ಬೇರೆಡೆಗೆ ಸ್ಥಳಾಂತರಗೊಂಡರೆ ಇದಕ್ಕೆ ಬದಲಾಗಿ ಬೇರೊಂದು ಪಂದ್ಯದ ಆತಿಥ್ಯವನ್ನು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನೀಡುವಂತೆ ಬಿಸಿಸಿಗೆ ಮನವಿ ಮಾಡಲಾಗಿತ್ತು. ಶುಕ್ರವಾರ KSCA ಮಾಡಿದ ಮನವಿಗೆ ಸ್ಪಂದಿಸಿರುವ ಬಿಸಿಸಿಐ, ಫೆಬ್ರವರಿ 27ರಂದು ನಡೆಯಲಿರುವ 2ನೇ ಟಿ20 ಪಂದ್ಯದ ಆತಿಥ್ಯವನ್ನು KSCAಗೆ ನೀಡಿದೆ. ಫೆಬ್ರವರಿ 24ರ ಮೊದಲ ಪಂದ್ಯ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಈ ಹಿಂದಿನ ವೇಳಾಪಟ್ಟಿಯಂತೆ 2ನೇ ಪಂದ್ಯಕ್ಕೆ ಆಂಧ್ರಪ್ರದೇಶ ಕ್ರಿಕೆಟ್ ಸಂಸ್ಥೆಯ ವಿಶಾಖಪಟ್ಟಣ ಕ್ರೀಡಾಂಗಣ ಆತಿಥ್ಯ ವಹಿಸಬೇಕಿತ್ತು. ಆದರೆ KSCA ಮನವಿಯನ್ನು ಪುರಸ್ಕರಿಸಿರುವ ಬಿಸಿಸಿಐ, ಆಂಧ್ರ ಕ್ರಿತೆಟ್ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿ 2ನೇ ಪಂದ್ಯದ ಆತಿಥ್ಯವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ನೀಡಿದೆ ಎಂದು KSCA ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

eight + eighteen =