ಗುಡ್ ನ್ಯೂಸ್… ರಾಹುಲ್, ಪಾಂಡ್ಯ ಅಮಾನತು ವಾಪಸ್

0

ಬೆಂಗಳೂರು, ಜನವರಿ 24: ಟೀಮ್ ಇಂಡಿಯಾ ಕ್ರಿಕೆಟಿಗರಾದ ಕೆ.ಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಮೇಲೆ ಹೇರಿದ್ದ ಅಮಾನತನ್ನು ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಹಿಂಪಡೆದಿದೆ.
ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿದ್ದಾರೆ ಎಂಬ ಆರೋಪದಲ್ಲಿ ರಾಹುಲ್ ಮತ್ತು ಪಾಂಡ್ಯ ಅವರನ್ನು ಬಿಸಿಸಿಐ ಅಮಾನತುಗೊಳಿಸಿತ್ತು. ಹೀಗಾಗಿ ಆಸ್ಟ್ರೇಲಿಯಾ ಪ್ರವಾಸದಿಂದ ಇಬ್ಬರೂ ಹೊರ ಬಿದ್ದಿದ್ದರು. ಅಷ್ಟೇ ಅಲ್ಲದೆ ನ್ಯೂಜಿಲೆಂಡ್ ಪ್ರವಾಸವನ್ನು ತಪ್ಪಿಸಿಕೊಂಡಿದ್ದರು. ಅಮಾನತು ಮಾಡಿದ ಎರಡು ವಾರಗಳ ನಂತರ ಇದೀಗ ಅಮಾನತು ಶಿಕ್ಷೆಯನ್ನು ವಾಪಸ್ ಪಡೆಯಲಾಗಿದೆ.
ಹಿರಿಯ ಅಡ್ವೋಕೇಟ್ ಪಿ.ಎಸ್ ನರಸಿಂಹ ಅವರೊಂದಿಗೆ ಮಾತುಕತೆ ನಡೆಸಿದ ನಂತರ ರಾಹುಲ್ ಮತ್ತು ಪಾಂಡ್ಯ ಮೇಲಿನ ಅಮಾನತನ್ನು ವಾಪಸ್ ಪಡೆಯಲು ಸಿಒಎ ನಿರ್ಧರಿಸಿದೆ. ಆದರೆ ಪ್ರಕರಣದ ತನಿಖೆ ಇನ್ನಷ್ಟೇ ನಡೆಯಬೇಕಿದ್ದು, ಇದಕ್ಕಾಗಿ ಸುಪ್ರೀಂ ಕೋರ್ಟ್ ಓಂಬುಡ್ಸ್ಮನ್ ನೇಮಕ ಮಾಡಲಿದೆ. ಓಂಬುಡ್ಸ್ಮನ್ ನೇಮಕ ಕುರಿತ ವಿಚಾರಣೆ ಫೆಬ್ರವರಿ 5ಕ್ಕೆ ನಡೆಯುವ ಸಾಧ್ಯತೆಯಿದೆ.
ಅಮಾನತು ಶಿಕ್ಷೆ ವಾಪಸ್ ಪಡೆದಿರುವುದರಿಂದ ರಾಹುಲ್ ಮತ್ತು ಪಾಂಡ್ಯ ಈ ಕ್ಷಣದಿಂದಲೇ ಕ್ರಿಕೆಟ್ ಗೆ ಮರಳುವ ಅವಕಾಶ ಪಡೆದಿದ್ದಾರೆ.

ಅಮಾನತು ವಾಪಸ್ ಕುರಿತಾಗಿ ಸಿಒಎ ಹೇಳಿಕೆ ಇಲ್ಲಿದೆ
Media Advisory

January 24, 2019

STATEMENT ISSUED BY THE COMMITTEE OF ADMINISTRATORS

The Committee of Administrators (“CoA”) had, by emails dated 11.01.2019, and in exercise of Rule 41(6) of the Constitution of BCCI, suspended Mr. Hardik Pandya and Mr. K.L. Rahul in view of the allegations of misconduct against them, pending adjudication of the allegations under Rule 46 of the approved BCCI Constitution.

Since the adjudication of all allegations of misconduct against any cricketer registered with, inter alia, the BCCI is required to be undertaken by the BCCI Ombudsman, whose appointment is pending directions of the Hon’ble Supreme Court of India, the CoA is the of the view that the interim suspension orders dated 11.01.2019 should be presently lifted with immediate effect.

The above matter and decision has been taken with the concurrence of the Learned Amicus Curiae, Mr. P.S. Narasimha. In view of the above, the suspension orders dated 11.01.2019 is immediately lifted pending appointment and adjudication of the allegations by the BCCI Ombudsman.

The Supreme Court Appointed Committee of Administrators of the BCCI

LEAVE A REPLY

Please enter your comment!
Please enter your name here

17 − 15 =