ಚತುಷ್ಕೋನ ಸರಣಿ: ಮನೀಶ್ ಪಾಂಡೆ ಶತಕ, ಭಾರತ ‘ಬಿ’-ಆಸ್ಟ್ರೇಲಿಯಾ ‘ಎ’ ನಡುವೆ ಬುಧವಾರ ಫೈನಲ್

0
PC: Manish Pandey/Twitter

ಬೆಂಗಳೂರು, ಆಗಸ್ಟ್ 27: ಕರ್ನಾಟಕದ ಬ್ಯಾಟ್ಸ್‌ಮನ್, ಭಾರತ ‘ಬಿ’ ತಂಡದ ನಾಯಕ ಮನೀಶ್ ಪಾಂಡೆ ಚತುಷ್ಕೋನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಸ್ಟ್ರೇಲಿಯಾ ‘ಎ’ ವಿರುದ್ಧ ಭರ್ಜರಿ ಶತಕ ಬಾರಿಸಿದ್ದಾರೆ. ಆದರೆ ಪಾಂಡೆ ಅವರ ಶತಕದ ನಡುವೆಯೂ ಆಸ್ಟ್ರೇಲಿಯಾ ‘ಎ’ ತಂಡ ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆದ್ದು, ಫೈನಲ್ ಪ್ರವೇಶಿಸಿದೆ.
ಬು‘ವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮತ್ತೆ ಭಾರತ ‘ಬಿ’ ಹಾಗೂ ಆಸ್ಟ್ರೇಲಿಯಾ ‘ಎ’ ತಂಡಗಳು ಸೆಣಸಾಡಲಿವೆ.
ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ‘ಬಿ’ ತಂಡ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿತು. ನಾಯಕ ಮನೀಶ್ ಪಾಂಡೆ 109 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ ಅಜೇಯ 117 ರನ್ ಸಿಡಿಸಿದರು.
ನಂತರ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ‘ಎ’ ತಂಡದ ಬ್ಯಾಟಿಂಗ್ ವೇಳೆ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ ಕಾರಣ ಡಕ್ವರ್ತ್ ಲೂಯಿಸ್ ನಿಯಮದನ್ವಯ 40 ಓವರ್‌ಗಳಲ್ಲಿ 247 ರನ್‌ಗಳ ಗುರಿ ನಿಗದಿ ಪಡಿಸಲಾಯಿತು. ಉಸ್ಮಾನ್ ಖವಾಜ ಅವರ ಅಜೇಯ ಶತಕದ ನೆರವಿನಿಂದ ಆಸ್ಟ್ರೇಲಿಯಾ ‘ಎ’ ತಂಡ 5 ವಿಕೆಟ್‌ಗೆ 248 ರನ್ ಗಳಿಸಿ ಜಯ ಗಳಿಸಿತು.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ‘ಎ’ ತಂಡ ಭಾರತ ‘ಎ’ ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸಿತು.

Brief score
India B: 276/6 in 50 overs (Manish Pandey 117 not out, Mayank Agarwal 36, Ishan Kishan 31; Micheal Neser 3/47).
Australia A: 248/5 in 40 overs (Usman Khawaja 101 not out, Jack Wildermuth 62 not out; Jalaj Saxena 2/48, Deepak Hooda 1/18).

India A: 157 all out in 37.3 overs (Deepak Chahar 38, Sanju Samson 36; Dane Paterson 5/19, Robbie Frylink 2/36).
South Africa A: 159/6 in 37.4 overs (Pieter Malan 47, Gihahn Cloete 24; Khaleel Ahmed 3/45, Krunal Pandya 2/37).

LEAVE A REPLY

Please enter your comment!
Please enter your name here

two × 1 =