ಚಿರತೆ ದತ್ತು ಸ್ವೀಕಾರ ಒಪ್ಪಂದ ನವೀಕರಣಗೊಳಿಸಿದ ಟೀಮ್ ಇಂಡಿಯಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ

0
PC: Twitter

ಚಿರತೆ ದತ್ತು ಸ್ವೀಕಾರ ಒಪ್ಪಂದ ನವೀಕರಣಗೊಳಿಸಿದ ಟೀಮ್ ಇಂಡಿಯಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ

ಮೈಸೂರು, ಆಗಸ್ಟ್ 27: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ, ಕನ್ನಡಗಿ ವೇದಾ ಕೃಷ್ಣಮೂರ್ತಿ ಮೈಸೂರು ಮೃಗಾಲಯದಲ್ಲಿ ಕಳೆದ ವರ್ಷ ಚಿರತೆಯೊಂದನ್ನು ದತ್ತು ಪಡೆದಿದ್ದರು. ಆ ದತ್ತು ಸ್ವೀಕಾರ ಅವಧಿಯನ್ನು ವೇದಾ, 2ನೇ ವರ್ಷಕ್ಕೆ ನವೀಕರಣಗೊಳಿಸಿದ್ದಾರೆ.
ಭಾವನಾ ಎಂಬ ಹೆಸರಿನ ಚಿರತೆಯನ್ನು ವೇದಾ ಕೃಷ್ಣಮೂರ್ತಿ ಪ್ರಾಣಿ ದತ್ತು ಯೋಜನೆಯಡಿಯಲ್ಲಿ 2018ರ ಸೆಪ್ಟೆಂಬರ್ 9ರಿಂದ 2019ರ ಸೆಪ್ಟೆಂಬರ್ 9ರವರೆಗೆ 35,000 ರೂ. ಪಾವತಿಸಿ ದತ್ತು ಸ್ವೀಕಾರ ಅವಯನ್ನು ನವೀಕರಣಗೊಳಿಸಿದ್ದಾರೆ.
ಕಳೆದ ವರ್ಷ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದ ವೇದಾ ಕೃಷ್ಣಮೂರ್ತಿ ಮೈಸೂರಿನಲ್ಲಿ ಕೆಪಿಎಲ್ ಪಂದ್ಯಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಚಿರತೆಯೊಂದನ್ನು ಒಂದು ವರ್ಷದ ಅವಗೆ ದತ್ತು ಪಡೆದಿದ್ದರು. ಈ ಒಪ್ಪಂದವನ್ನು ನವೀಕರಿಸುವ ಮೂಲಕ ವೇದಾ ತಮ್ಮ ಪ್ರಾಣಿ ಪ್ರೀತಿಯನ್ನು ಮುಂದುವರಿಸಿದ್ದಾರೆ.
ಚಿಕ್ಕಮಗಳೂರಿನ ಕಡೂರಿನವರಾದ 25 ವರ್ಷದ ವೇದಾ ಕೃಷ್ಣಮೂರ್ತಿ ಭಾರತ ಪರ ತಲಾ 48 ಏಕದಿನ ಹಾಗೂ ಟಿ20 ಪಂದ್ಯಗಳನ್ನಾಡಿದ್ದಾರೆ.

LEAVE A REPLY

Please enter your comment!
Please enter your name here

one × 2 =