ಚೀನಾ ಓಪನ್: ಕ್ವಾ. ಫೈನಲ್‌ನಲ್ಲಿ ಸಿಂಧು, ಶ್ರೀಕಾಂತ್‌ಗೆ ಸೋಲು

0
PC: twitter

ಚಾಂಗ್‌ಜೌ ಸೆಪ್ಟೆಂಬರ್ 21: ಭಾರತದ ಅಗ್ರಮಾನ್ಯ ತಾರೆಗಳಾದ ಪಿ.ವಿ ಸಿಂಧು ಮತ್ತು ಕಿಡಂಬಿ ಶ್ರೀಕಾಂತ್, ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಕಂಡಿದ್ದಾರೆ.
8ರ ಘಟ್ಟದ ಪಂದ್ಯದಲ್ಲಿ ಶ್ರೀಕಾಂತ್, ವಿಶ್ವ ಚಾಂಪಿಯನ್ ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ 9-21, 11-21ರ ಗೇಮ್‌ಗಳಿಂದ ಸುಲಭವಾಗಿ ಸೋಲೊಪ್ಪಿಕೊಂಡರು. ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು, ವಿಶ್ವದ 6ನೇ ರ್ಯಾಂಕ್‌ನ ಚೀನಾ ಆಟಗಾರ್ತಿ ಚೆನ್ ಯುಫಿ ವಿರುದ್ಧ 11-21, 21-11, 15-21ರ ಮೂರು ಗೇಮ್‌ಗಳ ಹೋರಾಟದಲ್ಲಿ ಸೋಲುಂಡ ಟೂರ್ನಿಯಿಂದ ಹೊರ ಬಿದ್ದರು.

LEAVE A REPLY

Please enter your comment!
Please enter your name here

2 + 2 =