ಚೀನಾ ಓಪನ್: ಕ್ವಾರ್ಟರ್ ಫೈನಲ್‌ಗೆ ಸಿಂಧು, ಶ್ರೀಕಾಂತ್

0
PC: Twitter/Srikant

ಚಾಂಗ್‌ಜೌ, ಸೆಪ್ಟೆಂಬರ್ 20: ಭಾರತದ ಟಾಪ್ ಶಟ್ಲರ್‌ಗಳಾದ ಪಿ.ವಿ ಸಿಂಧು ಮತ್ತು ಕಿಡಂಬಿ ಶ್ರೀಕಾಂತ್, ಟೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ 3ನೇ ಶ್ರೇಯಾಂಕದ ಸಿಂಧು, ಥಾಯ್ಲೆಂಡ್‌ನ ಬುಸಾನನ್ ಓನ್ಗ್‌ಬಮ್ರುನ್ಗ್‌ಪಾನ್ ಅವರನ್ನು 21-23, 21-13, 2-18ರ ಕಠಿಣ ಹೋರಾಟದಲ್ಲಿ ಮಣಿಸಿ ಅಂತಿಮ 8ರ ಘಟ್ಟಕ್ಕೆ ಅರ್ಹತೆ ಪಡೆದರು.
ಪುರುಷರ ಸಿಂಗಲ್ಸ್‌ನಲ್ಲಿ 7ನೇ ಶ್ರೇಯಾಂಕ ಪಡೆದಿರುವ ಕಿಡಂಬಿ ಶ್ರೀಕಾಂತ್, ಥಾಯ್ಲೆಂಡ್‌ನ ಸುಪ್ಪಾನ್ಯು ಅವಿಂಗ್ಸನನ್ ವಿರುದ್ಧ 21-12, 15-21, 24-22ರ ಗೇಮ್‌ಗಳಿಂದ ಗೆದ್ದು ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟರು.
ಆದರೆ ಡಬಲ್ಸ್ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಭಾರತದ ಹೋರಾಟ ಅಂತ್ಯಗೊಂಡಿದೆ. ಮಿಶ್ರ ಡಬಲ್ಸ್‌ನಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್ ಸಾಯಿರಾಜ್ ಜೋಡಿ, ಚೀನಾದ ಅಗ್ರಶ್ರೇಯಾಂಕಿತ ಜೋಡಿಯಾದ ಸಿವೆಯ್ ಜೆಂಗ್ ಮತ್ತು ಹುವಾಂಗ್ ಯೆಡಿಯಾಂಗ್ ವಿರುದ್ಧ 14-21, 11-21ರಲ್ಲಿ ಸೋಲುಂಡಿತು.
ಮತ್ತೊಂದು ಮಿಶ್ರ ಡಬಲ್ಸ್‌ನಲ್ಲಿ ಸಿಕ್ಕಿ ರೆಡ್ಡಿ ಮತ್ತು ಪ್ರಣವ್ ಚೋಪ್ರಾ ಜೋಡಿ, ಡೆನ್ಮಾರ್ಕ್‌ನ ಕ್ರಿಸ್ಟಿನಾ ಪೆಡರ್ಸನ್ ಹಾಗೂ ಮಥಾಯಸ್ ಕ್ರಿಸ್ಟಿಯನ್‌ಸೆನ್ ವಿರುದ್ಧ 16-21, 10-21ರಲ್ಲಿ ಸೋಲು ಕಂಡಿತು.
ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಮತ್ತು ಸುಮೀತ್ ರೆಡ್ಡಿ ಜೋಡಿ, ಚೆನ್ ಹುವಾಂಗ್ ಲೆಂಗ್ ಹಾಗೂ ವಾಂಗ್ ಚಿ-ಲಿನ್ ವಿರುದ್ಧ 9-21, 10-21ರಲ್ಲಿ ಮುಗ್ಗರಿಸಿತು.

LEAVE A REPLY

Please enter your comment!
Please enter your name here

12 + 15 =