ಚೆಸ್: ಎಂಇಎಸ್ ಡಿಗ್ರಿ ಕಾಲೇಜು ತಂಡ ಸಮಗ್ರ ಚಾಂಪಿಯನ್ಸ್

0

ಬೆಂಗಳೂರು, ಅಕ್ಟೋಬರ್ 1: ಎಂಇಎಸ್ ಡಿಗ್ರಿ ಕಾಲೇಜು ಆ್ ಆರ್ಟ್ಸ್, ಕಾಮರ್ಸ್ ಮತ್ತು ಸೈನ್ಸ್ ತಂಡ, ಬೆಂಗಳೂರು ವಿಶ್ವವಿದ್ಯಾಲಯ ಅಂತರ್ ಕಾಲೇಜು ಚೆಸ್ ಟೂರ್ನಿಯ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಸಮಗ್ರ ಚಾಂಪಿಯನ್‌ಷಿಪ್ ತನ್ನದಾಗಿಸಿಕೊಂಡಿದೆ.
ಸೆಪ್ಟೆಂಬರ್ 27ರಿಂದ 29ರವೆರೆಗ ಸೌಂದರ್ಯ ಇನ್ಸ್‌ಟಿಟ್ಯೂಟ್ ಆ್ ಮ್ಯಾನೇಜ್ಮೆಂಟ್ ಮತ್ತು ಸೈನ್ಸ್ ಆಶ್ರಯದಲ್ಲಿ ನಡೆದ ಟೂರ್ನಿಯಲ್ಲಿ ಎಂಇಎಸ್ ಡಿಗ್ರಿ ಕಾಲೇಜು ತಂಡ ಪುರುಷರ ವಿಭಾಗದಲ್ಲಿ 34 ಅಂಕ ಹಾಗೂ ಮಹಿಳಾ ವಿಭಾಗದಲ್ಲಿ 30 ಅಂಕ ಗಳಿಸಿ ಸಮಗ್ರ ಚಾಂಪಿಯನ್‌ಷಿಪ್ ತನ್ನದಾಗಿಸಿಕೊಂಡಿತು.
ತೃತೀಯ ಬಿಎಸ್‌ಸಿಯ ಸುಜಯ್ ಬಿ.ಎಂ 8 ಅಂಕಗಳೊಂದಿಗೆ ವೈಯಕ್ತಿಕ 2ನೇ ಸ್ಥಾನ ಪಡೆದರು. ಮಹಿಳಾ ವಿಭಾಗದಲ್ಲಿ ತೃತೀಯ ಬಿ.ಕಾಂ.ನ ಊರ್ವಿ 7.5 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದರು. ಅಲ್ಲದೆ ದಕ್ಷಿಣ ವಲಯ ಅಂತರ್ ಯೂನಿವರ್ಟಿಸಿ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here

5 × 2 =