ಜಪಾನ್ ಓಪನ್: ಕ್ವಾರ್ಟರ್ ಫೈನಲ್‌ನಲ್ಲಿ ಶ್ರೀಕಾಂತ್‌ಗೆ ಸೋಲು

0
Kidambi Srikanth. PC: DD Sports/Twitter

ಟೋಕಿಯೊ, ಸೆಪ್ಟೆಂಬರ್ 13: ಭಾರತದ ಸ್ಟಾರ್ ಶಟ್ಲರ್ ಕಿಡಂಬಿ ಶ್ರೀಕಾಂತ್, ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಸೋಲುಂಡು ಹೋರಾಟ ಕೊನೆಗೊಳಿಸಿದ್ದಾರೆ.
1 ಗಂಟೆ 19 ನಿಮಿಷಗಳ ಜಿದ್ದಾಜಿದ್ದಿನ ಕ್ವಾರ್ಟರ್ ಫೈನಲ್‌ನಲ್ಲಿ ಶ್ರೀಕಾಂತ್, ಕೊರಿಯಾದ ಲೀ ಡಾಂಗ್ ಕಿಯುನ್ ವಿರುದ್ಧ 21-19, 16-21, 18-21 ಗೇಮ್‌ಗಳಿಂದ ಸೋಲುಂಡರು.
ಶ್ರೀಕಾಂತ್ ಸೋಲಿನೊಂದಿಗೆ ಟೂರ್ನಿಯಲ್ಲಿ ಭಾರತೀಯರ ಹೋರಾಟವೂ ಕೊನೆಗೊಂಡಂತಾಗಿದೆ. ಏಷ್ಯನ್ ಗೇಮ್ಸ್ ಮತ್ತು ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಮತ್ತು ಎಚ್.ಎಸ್ ಪ್ರಣೋಯ್ ಈ ಹಿಂದಿನ ಸುತ್ತುಗಳಲ್ಲಿಯೇ ಪರಾಜಯ ಅನುಭವಿಸಿದ್ದರು.

LEAVE A REPLY

Please enter your comment!
Please enter your name here

fourteen − four =