ಜಪಾನ್ ಓಪನ್: ಸಿಂಧು, ಶ್ರೀಕಾಂತ್ ಕ್ವಾರ್ಟರ್ ಫೈನಲ್‌ಗೆ

0
PC: Twitter

ಟೋಕಿಯೊ, ಸೆಪ್ಟೆಂಬರ್ 11: ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಪಿ.ವಿ ಸಿಂಧು, ಕಿಡಂಬಿ ಶ್ರೀಕಾಂತ್ ಮತ್ತು ಎಚ್.ಎಸ್ ಪ್ರಣೋಯ್, ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಮಂಗಳವಾರ ನಡೆದ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ 3ನೇ rankನ ಸಿಂಧು, ಆತಿಥೇಯ ಜಪಾನ್‌ನ ಸಯಾಕ ಟಕಹಾಶಿ ವಿರುದ್ಧ 21-17, 7-21, 21-13ರ ಪ್ರಯಾಸದ ಗೆಲುವು ಸಾಸಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದರು. ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು, ಚೀನಾದ ಫಾನ್‌ಗ್ಜೀ ಗಾವೊ ಅವರನ್ನು ಎದುರಿಸಲಿದ್ದಾರೆ.
ವಿಶ್ವದ 8ನೇ rankನ ಕಿಡಂಬಿ ಶ್ರೀಕಾಂತ್, ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಚೀನಾದ ಯುಕ್ಸಿಯಾಂಗ್ ಹುವಾಂಗ್ ಅವರನ್ನು 21-13, 21-15 ಗೇಮ್‌ಗಳಿಂದ ಸೋಲಿಸಿದರು. ಎಚ್.ಎಸ್ ಪ್ರಣೋಯ್ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟೀ ಅವರನ್ನು 21-18, 21-17ರಲ್ಲಿ ಬಗ್ಗು ಬಡಿದರು.
ಮಿಶ್ರ ಡಬಲ್ಸ್‌ನಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಆಂಧ್ರದ ಸಾತ್ವಿಕ್ ರಾಂಕಿ ರೆಡ್ಡಿ ಜೋಡಿ ಚೀನಾದ ಯಿಲ್ಯು ವಾಂಗ್ ಮತ್ತು ಡಾಂಗ್‌ಪಿಂಗ್ ಹುವಾಂಗ್ ವಿರುದ್ಧ 13-21, 17-21ರಲ್ಲಿ ಸೋಲು ಕಂಡರೆ, ಪ್ರಣವ್ ಚೋಪ್ರಾ ಮತ್ತು ಸಿಕ್ಕಿ ರೆಡ್ಡಿ ಜೋಡಿ ಮಲೇಷ್ಯಾದ ಮ್ಯಾಥ್ಯೂ ಫೋಗಾರ್ಟಿ ಮತ್ತು ಇಸಾಬೆಲ್ ಜಾಂಗ್ ವಿರುದ್ಧ 21-9, 21-6ರ ಸುಲಭ ಜಯ ಗಳಿಸಿತು.

LEAVE A REPLY

Please enter your comment!
Please enter your name here

1 × three =