ಜೋಹರ್ ಕಪ್: ಭಾರತದ ಕಿರಿಯರ ತಂಡಕ್ಕೆ ಮನ್ದೀಪ್ ಮೊರ್ ಸಾರಥ್ಯ

0

ಬೆಂಗಳೂರು, ಸೆಪ್ಟೆಂಬರ್ 19: ಮಲೇಷ್ಯಾದ ಬಹ್ರುವಿನಲ್ಲಿ ಅಕ್ಟೋಬರ್ 6ರಿಂದ 13ರವರೆಗೆ ನಡೆಯಲಿರುವ 8ನೇ ಸುಲ್ತಾನ್ ಜೋಹರ್ ಕಪ್ ಟೂರ್ನಿಯಲ್ಲಿ ಭಾರತದ ಕಿರಿಯರ ಹಾಕಿ ತಂಡವನ್ನು ಮನ್ದೀಪ್ ಮೊರ್ ಮುನ್ನಡೆಸಲಿದ್ದಾರೆ.
18 ಸದಸ್ಯರ ತಂಡವನ್ನು ಹಾಕಿ ಇಂಡಿಯಾ ಬುಧವಾರ ಪ್ರಕಟಿಸಿದ್ದು, ಭಾರತ ತಂಡ ಮಲೇಷ್ಯಾ, ನ್ಯೂಜಿಲೆಂಜ್, ಜಪಾನ್, ಆಸ್ಟ್ರೇಲಿಯಾ ಮತ್ತು ಗ್ರೇಟ್ ಬ್ರಿಟನ್ ತಂಡಗಳ ವಿರುದ್ಧ 5 ರೌಂಡ್ ರಾಬಿನ್ ಪಂದ್ಯಗಳನ್ನಾಡಲಿದೆ. ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯಲಿವೆ.
ಅಕ್ಟೋಬರ್ 8ರಂದು ಸಂಜೆ 6 ಗಂಟೆಗೆ ಆರಂಭವಾಗಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಮಲೇಷ್ಯಾ ತಂಡವನ್ನು ಎದುರಿಸಲಿದೆ.

ಭಾರತದ ಕಿರಿಯರ ತಂಡ
ಗೋಲ್‌ಕೀಪರ್ಸ್: ಕಮಲ್ಬೀರ್ ಸಿಂಗ್, ಪಂಕಜ್ ಕುಮಾರ್ ರಾಜಕ್
ಡಿಫೆಂಡರ್ಸ್: ಸುಮನ್ ಬೆಕ್, ಮೊಹಮ್ಮದ್ ರಾಜ್, ಸೋಮ್‌ಜೀತ್, ಮನ್‌ದೀಪ್ ಮೊರ್(ನಾಯಕ), ಪ್ರಿನ್ಸ್, ವಾರಿಂದರ್ ಸಿಂಗ್.
ಮಿಡ್‌ಫೀಲ್ಡರ್ಸ್: ಯಶ್‌ದೀಪ್ ಸಿವಾಚ್, ಹರ್ಮನ್‌ಜಿತ್ ಸಿಂಗ್, ವಿಷ್ಣುಕಾಂತ್ ಸಿಂಗ್, ಗೋಪಿ ಕುಮಾರ್ ಸೋನ್ಕರ್, ವಿಶಾಲ್ ಅಂತಿಲ್, ಹಸ್ಪ್ರೀತ್ ಸಿಂಗ್.
ಫಾರ್ವರ್ಡ್ಸ್: ಗುರ್ಸಹಬ್ಜಿತ್ ಸಿಂಗ್, ಅಭಿಷೇಕ್, ಪ್ರಬ್ಜೋತ್ ಸಿಂಗ್, ಶಿಲಾನಂದ್ ಲಾಕ್ರಾ(ಉಪನಾಯಕ).

LEAVE A REPLY

Please enter your comment!
Please enter your name here

twenty + nine =