ಟಿ20 ಕಾರ್ಪೊರೆಟ್ ಕ್ರಿಕೆಟ್: ಕಿಂಗ್ ಫಿಷರ್ ಕಪ್ ಭಾನುವಾರ ಆರಂಭ

0
PC: Pixabay

ಬೆಂಗಳೂರು, ಅಕ್ಟೋಬರ್ 25: ಅದ್ಭುತ ಮನರಂಜನೆಗಳಿಂದ ಕೂಡಿದ ಕಿಂಗ್ ಷಿಷರ್ ಕಪ್ ಟಿ20 ಕ್ರಿಕೆಟ್ ಟೂರ್ನೀ ಭಾನುವಾರ ಆರಂಭವಾಗಲಿದೆ. ಬೆಂಗಳೂರು ಹೊರವಲಯದಲ್ಲಿರುವ ದೊಡ್ಡಾಲದಮರ ಬಳಿಯ ಕಿನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ಅಮೆಟೆಕ್ ತಂಡಗಳು ಮುಖಾಮುಖಿಯಾಗಲಿವೆ.

1997ರಲ್ಲಿ ಆರಂಭಗೊಂಡಿದ್ದ ಕಿಂಗ್ ಫಿಷರ್ ಕಪ್ ಟೂರ್ನಿ 22ನೇ ಆವೃತ್ತಿಗೆ ಕಾಲಿಟ್ಟಿದ್ದು, ಬೆಂಗಳೂರಿನ ಅಗ್ರ 20 ಕಾರ್ಪೊರೆಟ್ ತಂಡಗಳು ಈ ಬಾರಿ ಪ್ರಶಸ್ತಿಗಾಗಿ ಸೆಣಸಾಡಲಿವೆ.
ಟೂರ್ನಿಯ ಬಗ್ಗೆ ಮಾಹಿತಿ ನೀಡಿದ ಆಯೋಜಕರಾದ ಎಸ್.ಕೆ ವೆಂಕಟೇಶ್, ‘’ಈ ಟೂರ್ನಿ ತುಂಬಾ ವರ್ಷಗಳಿಂದ ನಡೆದುಕೊಂಡು ಬಂದಿದೆ. ನಮ್ಮ ಟೂರ್ನಿಯಲ್ಲಿ ಆಡಿದ ಕೆಲ ಆಟಗಾರರು ಭಾರತ ತಂಡದ ಪರ ಆಡಿರುವುದು ಹೆಮ್ಮೆಯ ಸಂಗತಿ. 22ನೇ ಆವೃತ್ತಿಯ ಟೂರ್ನಿಯನ್ನು ಆಯೋಜಿಸಲು ಉತ್ಸುಕರಾಗಿದ್ದೇವೆ. ಅತ್ಯುತ್ತಮ ತಂಡಗಳು ಈ ಬಾರಿ ಕಣದಲ್ಲಿವೆ. ಈ ವರ್ಷ ಪಂದ್ಯಗಳು ನೆಲಮಂಗಲ ಬಳಿ ಇರುವ ಆದಿತ್ಯ ಗ್ಲೋಬಲ್ ಮೈದಾನ ಹಾಗೂ ಕಿನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿವೆ,’’ ಎಂದರು.

Teams: United Breweries Limited, Colt Tech, Replicon, Tayyarrah Software, Tayyarrah Telkom, TV5, Suvarna News, DXC HP, Microsoft, Nester Software, sapna Royals, Target, Tata Consultancy Services, Ametek, SAP India, Accenture, Press Club of Bangalore, Falcom, Etelkom, Rittal India, Onmobile, KPIT, Congnizant.

LEAVE A REPLY

Please enter your comment!
Please enter your name here

4 × one =