ಟಿ20 ಕ್ರಿಕೆಟ್: ಸೋಲಿಲ್ಲದ ಸರದಾರ ಕರ್ನಾಟಕದ ಅಮೋಘ ದಾಖಲೆ.. 14 ನಾಟೌಟ್..!

0

ಬೆಂಗಳೂರು, ಮಾರ್ಚ್ 15: ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿರುವ ಕರ್ನಾಟಕ ತಂಡ ದೇಶೀಯ ಕ್ರಿಕೆಟ್ ನಲ್ಲಿ ಐತಿಹಾಸಿಕ ದಾಖಲೆ ಬರೆದಿದೆ.

ಭಾರತೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಸತತವಾಗಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ರಾಜ್ಯ ತಂಡವೆಂಬ ದಾಖಲೆಗೆ ಕರ್ನಾಟಕ ಪಾತ್ರವಾಗಿದೆ. ಕಳೆದ ಸಾಲಿನ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕೊನೆಯ ಎರಡು ಸೂಪರ್ ಲೀಗ್ ಪಂದ್ಯಗಳನ್ನು ಗೆದ್ದಿದ್ದ ಕರ್ನಾಟಕ, ಈ ಬಾರಿ ಸತತ 12 ಪಂದ್ಯಗಳನ್ನು ಗೆದ್ದು ಅಜೇಯ ಗೆಲುವಿನ ಓಟವನ್ನು 14ಕ್ಕೆ ಏರಿಸಿಕೊಂಡಿದೆ.

ಐಪಿಎಲ್ ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವೂ ಸತತ 14 ಪಂದ್ಯಗಳನ್ನು ಗೆದ್ದಿದ್ದು, ಆ ದಾಖಲೆಯನ್ನು ಕರ್ನಾಟಕ ತಂಡ ಸರಿಗಟ್ಟಿದೆ.

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ 2018-2018:  ಕರ್ನಾಟಕ ತಂಡದ ಸತತ 14 ಗೆಲುವುಗಳು

 1. ಜಾರ್ಖಂಡ್ ವಿರುದ್ಧ 123 ರನ್ ಜಯ (2018, ಕೋಲ್ಕತ್ತ, ಸೂಪರ್ ಲೀಗ್)
 2. ಮುಂಬೈ ವಿರುದ್ಧ 7 ವಿಕೆಟ್ ಜಯ (2018, ಕೋಲ್ಕತ್ತ, ಸೂಪರ್ ಲೀಗ್)
 3. ಅಸ್ಸಾಂ ವಿರುದ್ಧ 15 ರನ್ ಜಯ (2019, ಲೀಗ್ ಪಂದ್ಯ)
 4. ಬಂಗಾಳ ವಿರುದ್ಧ 9 ವಿಕೆಟ್ ಜಯ (2019, ಲೀಗ್ ಪಂದ್ಯ)
 5. ಅರುಣಾಚಲ ಪ್ರದೇಶ ವಿರುದ್ಧ 146 ರನ್ ಜಯ (2019, ಲೀಗ್ ಪಂದ್ಯ)
 6. ಮಿಜೋರಾಂ ವಿರುದ್ಧ 137 ರನ್ ಜಯ (2019, ಲೀಗ್ ಪಂದ್ಯ)
 7. ಛತ್ತೀಸ್ ಗಢ ವಿರುದ್ಧ 4 ವಿಕೆಟ್ ಜಯ (2019, ಲೀಗ್ ಪಂದ್ಯ)
 8. ಒಡಿಶಾ ವಿರುದ್ಧ 51 ರನ್ ಜಯ (2019, ಲೀಗ್ ಪಂದ್ಯ)
 9. ಹರ್ಯಾಣ ವಿರುದ್ಧ 14 ರನ್ ಜಯ (2019, ಲೀಗ್ ಪಂದ್ಯ)
 10. ಮುಂಬೈ ವಿರುದ್ಧ 9 ವಿಕೆಟ್ ಜಯ (2019, ಸೂಪರ್ ಲೀಗ್ ಪಂದ್ಯ)
 11. ಉತ್ತರ ಪ್ರದೇಶ ವಿರುದ್ಧ 10 ರನ್ ಜಯ (2019, ಸೂಪರ್ ಲೀಗ್ ಪಂದ್ಯ)
 12. ದೆಹಲಿ ವಿರುದ್ಧ 8 ವಿಕೆಟ್ ಜಯ (2019, ಸೂಪರ್ ಲೀಗ್ ಪಂದ್ಯ)
 13. ವಿದರ್ಭ ವಿರುದ್ಧ 6 ವಿಕೆಟ್ ಜಯ (2019, ಸೂಪರ್ ಲೀಗ್ ಪಂದ್ಯ)
 14. ಮಹಾರಾಷ್ಟ್ರ ವಿರುದ್ಧ 8 ವಿಕೆಟ್ ಜಯ (2019, ಫೈನಲ್)

LEAVE A REPLY

Please enter your comment!
Please enter your name here

fourteen + seventeen =