ಟಿ20 ವಿಶ್ವಕಪ್ ತಂಡದಲ್ಲಿ ವೇದಾಗೆ ಸ್ಥಾನ, ರಾಜೇಶ್ವರಿ ಗಾಯಕ್ವಾಡ್ ಔಟ್

0
PC: Veda Krishnamurthy/Facebook

ಬೆಂಗಳೂರು, ಸೆಪ್ಟೆಂಬರ್ 28: ನವೆಂಬರ್ 9ರಿಂದ 24ರವರೆಗೆ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ 6ನೇ ಆವೃತ್ತಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ಏಕೈಕ ಆಟಗಾರ್ತಿಯಾಗಿ ವೇದಾ ಕೃಷ್ಣಮೂರ್ತಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಆದರೆ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ತಂಡವನ್ನು ಆಲ್ರೌಂಡರ್ ಹರ್ಮನ್‌ಪ್ರೀತ್ ಕೌರ್ ಮುನ್ನಡೆಸಲಿದ್ದು, ಆರಂಭಿಕ ಆಟಗಾರ್ತಿ ಸ್ಮತಿ ಮಂಧನ ಉಪನಾಯಕಿಯಾಗಿ ಮುಂದುವರಿದಿದ್ದಾರೆ. ಭಾರತ ತಂಡ ಬಿ ಗುಂಪಿನಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಐರ್ಲೆಂಡ್ ತಂಡಗಳೊಂದಿಗೆ ಸ್ಥಾನ ಪಡೆದಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ನವೆಂಬರ್ 9ರಂದು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

ಐಸಿಸಿ ಟಿ20 ಮಹಿಳಾ ವಿಶ್ವಕಪ್‌ಗೆ ಭಾರತ ತಂಡ
ಹರ್ಮನ್‌ಪ್ರೀತ್ ಕೌರ್(ನಾಯಕಿ), ಸ್ಮತಿ ಮಂಧನ(ಉಪನಾಯಕಿ), ಜೆಮಿಮಾ ರಾಡ್ರಿಗ್ಸ್, ಮಿಥಾಲಿ ರಾಜ್, ವೇದಾ ಕೃಷ್ಣಮೂರ್ತಿ, ದೀಪ್ತಿ ಶರ್ಮಾ, ತಾನಿಯಾ ಭಾಟಿಯಾ(ವಿಕೆಟ್ ಕೀಪರ್), ಅನುಜಾ ಪಾಟೀಲ್, ಪೂನಂ ಯಾದವ್, ರಾಧಾ ಯಾದವ್, ಏಕ್ತಾ ಬಿಶ್ಟ್, ಡಿ. ಹೇಮಲತಾ, ಮಾನಸಿ ಜೋಶಿ, ಪೂಜಾ ವಸಕರ್, ಅರುಂಧತಿ ರೆಡ್ಡಿ.

ಭಾರತ ತಂಡದ ವೇಳಾಪಟ್ಟಿ
ನವೆಂಬರ್ 9: ನ್ಯೂಜಿಲೆಂಡ್ ವಿರುದ್ಧ, ಗಯಾನ
ನವೆಂಬರ್ 11: ಪಾಕಿಸ್ತಾನ ವಿರುದ್ಧ, ಗಯಾನ
ನವೆಂಬರ್ 15: ಐರ್ಲೆಂಡ್ ವಿರುದ್ಧ, ಗಯಾನ
ನವೆಂಬರ್ 17: ಆಸ್ಟ್ರೇಲಿಯಾ ವಿರುದ್ಧ, ಗಯಾನ

LEAVE A REPLY

Please enter your comment!
Please enter your name here

four × two =