ಟಿ20 Star Kingfisher ಕಪ್: ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಪ್ರೆಸ್ ಕ್ಲಬ್ ತಂಡ

0
Man of the match Sameer Manager (centre) from Press of Bangalore.

ಬೆಂಗಳೂರು, ನವೆಂಬರ್ 5: ಪ್ರೆಸ್ ಕ್ಲಬ್ ಆಫ್ ಬೆಂಗಳೂರು ತಂಡ, ಸ್ಟಾರ್ ಕಿಂಗ್ ಫಿಷರ್ ಕಪ್ ಟಿ20 ಟೂರ್ನಿಯಲ್ಲಿ ಸತತ 2ನೇ ಗೆಲುವಿನೊಂದಿಗೆ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ನೆಲಮಂಗಲ ಬಳಿ ಇರುವ ಆದಿತ್ಯ ಗ್ಲೋಬಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪ್ರೆಸ್ ಕ್ಲಬ್ ತಂಡ, ಸುವರ್ಣ ನ್ಯೂಸ್ ತಂಡದ ವಿರುದ್ಧ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸುವರ್ಣ ನ್ಯೂಸ್ ತಂಡ 18.2 ಓವರ್ ಗಳಲ್ಲಿ ಕೇವಲ 60 ರನ್ನಿಗೆ ಆಲೌಟಾಯಿತು. ಪ್ರೆಸ್ ಕ್ಲಬ್ ಪರ ಸಮೀರ್(3/5) 3 ವಿಕೆಟ್ ಪಡೆದರೆ, ವಿನಯ್(2/4) ಮತ್ತು ಕಿರಣ್ ಎಚ್.ವಿ (2/18) ತಲಾ ಎರಡು ವಿಕೆಟ್ ಉರುಳಿಸಿದರು. ಸೈಯದ್ (1/6) ಮತ್ತು ಯತೀಶ್ (1/2) ತಲಾ ಒಂದು ವಿಕೆಟ್ ಪಡೆದರು.

ನಂತರ ಸುಲಭ ಗುರಿ ಬೆನ್ನಟ್ಟಿದ ಪ್ರೆಸ್ ಕ್ಲಬ್ ತಂಡ 8.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿ ಜಯ ದಾಖಲಿಸಿತು. ಪ್ರೆಸ್ ಕ್ಲಬ್ ಪರ ಸುದರ್ಶನ್ ಅಜೇಯ 24 ಮತ್ತು ಮನು ಅಯ್ಯಪ್ಪ 15 ರನ್ ಗಳಿಸಿದರು. ಇನ್ನುಳಿದ ಪಂದ್ಯಗಳಲ್ಲಿ ಕೋಲ್ಟ್ ಟೆಕ್ನಾಲಜೀಸ್ ವಿರುದ್ಧ ವಿಜಯ ಕರ್ನಾಟಕ ತಂಡ 6 ವಿಕೆಟ್ ಗಳ ಸೋಲು ಕಂಡರೆ, ಫಾಲ್ಕನ್ ತಂಡದ ವಿರುದ್ಧ ಟಿವಿ5 ತಂಡ 202 ರನ್ ಗಳ ಭಾರೀ ಅಂತರದ ಸೋಲುಂಡಿತು.

Brief scores: Suvarna News: 60 all out in 18.2 overs (Amit 9, Vinod 9; Sameer 3/5, Vinay 2/4, Kiran H.V 2/18, Yathish 1/2, Syed 1/6) lost to Press Club of Bangalore: 61/2 in 8.2 overs (Sudarshan 24 not out, Manu Aiyappa 15, Vishwas 8; Abraham 1/18) by 8 wickets.

Vijay Karnataka: 78/9 in 20 overs (Nagraj 21; Bharath 3/11) lost to Colt Technologies: 81/4 in 11.5 overs (Shanley 43 not out) by 6 wickets.

Falcon: 235/2 in 20 overs (Ismail 93, Pushkar 98; Veeresh 1/35) beat Tv5: 33 all out in 14.1 overs (Paramesh 6, Ruru 10; Tabrez 4/6, Shoaib 3/4) by 202 runs.

LEAVE A REPLY

Please enter your comment!
Please enter your name here

13 + four =