ಟೆನಿಸ್ ದಿಗ್ಗಜನನ್ನು ಭೇಟಿ ಮಾಡಿದ ಕ್ರಿಕೆಟ್ ದಿಗ್ಗಜ

0
PC: Aus Open/Twitter

ಮೆಲ್ಬರ್ನ್, ಜನವರಿ 19: ಭಾರತ ಕ್ರಿಕೆಟ್ ತಂಡದ ನಾಯಕ, ಆಧುನಿಕ ಕ್ರಿಕೆಟ್ ನ ಸರ್ವಶ್ರೇಷ್ಠ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಟೆನಿಸ್ ದಿಗ್ಗಜ ರೋಜರ್ ಫೆಡರರ್ ಅವರನ್ನು ಭೇಟಿಯಾಗಿದ್ದಾರೆ.

ಮೆಲ್ಬರ್ನ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ವೇಳೆ ಫೆಡರರ್ ಅವರನ್ನು ವಿರಾಟ್ ಕೊಹ್ಲಿ ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ವಿರಾಟ್ ಕೊಹ್ಲಿ ಜೊತೆಗಿದ್ದರು. ರೋಜರ್ ಫೆಡರರ್ ಜೊತೆ ವಿರಾಟ್ ಕೊಹ್ಲಿ ದಂಪತಿ ಇರುವ ಚಿತ್ರವನ್ನು ಆಸ್ಟ್ರೇಲಿಯನ್ ಓಪನ್ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ. ಅಷ್ಟೇ ಅಲ್ಲದೆ ”ಒಂದೇ ಚಿತ್ರದಲ್ಲಿ ಮೂವರು ದಿಗ್ಗಜರು” ಎಂದು ಬರೆದುಕೊಂಡಿದೆ.

ಸ್ವಿಟ್ಜರ್ಲೆಂಡ್ ನ 37 ವರ್ಷದ ರೋಜರ್ ಫೆಡರರ್ ತಮ್ಮ ವೃತ್ತಿಜೀವನದಲ್ಲಿ 20 ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದರಲ್ಲಿ 6 ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

ten − four =