ಟೆಸ್ಚ್ : ಮಯಾಂಕ್ ಹೋರಾಟ ವ್ಯರ್ಥ, ಭಾರತ ‘ಎ’ ತಂಡಕ್ಕೆ ಸೋಲು

0

ಬೆಂಗಳೂರು, ಸೆಪ್ಟೆಂಬರ್ 5: ಕರ್ನಾಟಕದ ರನ್ ಮಷಿನ್ ಮಯಾಂಕ್ ಅಗರ್ವಾಲ್(80) ಅವರ ಏಕಾಂಗಿ ಹೋರಾಟ ಫಲ ನೀಡಲಿಲ್ಲ. ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಅಂತ್ಯಗೊಂಡ ಆಸ್ಟ್ರೇಲಿಯಾ ‘ಎ’ ವಿರುದ್ಧದ ಪ್ರಥಮ ಅನಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ‘ಎ’ ತಂಡ 98 ರನ್‌ಗಳ ಸೋಲು ಕಂಡಿದೆ.
ಗೆಲ್ಲಲು 262 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ‘ಎ’ ತಂಡ, 3ನೇ ದಿನದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 62 ರನ್ ಗಳಿಸಿತ್ತು. 4ನೇ ಹಾಗೂ ಅಂತಿಮ ದಿನವಾದ ಬುಧವಾರ ಆಟ ಮುಂದುವರಿಸಿದ ಶ್ರೇಯಸ್ ಅಯ್ಯರ್ ಪಡೆ, 101 ಸೇರಿಸುವಷ್ಟರಲ್ಲಿ ಉಳಿದ 8 ವಿಕೆಟ್‌ಗಳನ್ನು ಕಳೆದುಕೊಂಡು ಹೀನಾಯ ಸೋಲು ಅನುಭವಿಸಿತು.
ಅಮೋಘ ಫಾರ್ಮ್‌ನಲ್ಲಿರುವ ಮಯಾಂಕ್ ಅಗರ್ವಾಲ್ 9 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 80 ರನ್ ಗಳಿಸಿ ಭಾರತ ‘ಎ’ ಪರ ಏಕಾಂಗಿ ಹೋರಾಟ ನಡೆಸಿದರು.
ಆಸ್ಟ್ರೇಲಿಯಾ ‘ಎ’ ಪರ ಮಾರಕ ದಾಳಿ ನಡೆಸಿದ ಜಾನ್ ಹೋಲ್ಯಾಂಡ್ 81 ರನ್ನಿತ್ತು 6 ವಿಕೆಟ್ ಪಡೆದು ಆತಿಥೇಯರ ಸೋಲಿಗೆ ಕಾರಣರಾದರು.

Brief scores: KSCA (T) (Day 4): Australia “A”: 243 all out in 75.3 overs and 2nd Innings: 292 all out in 83.5 overs beat India “A”: 274 all out in 83. 1 overs and 2nd Innings: 163 all out in 59.3 over (Mayank Agarwal 80, AR Bawane 25, Jon Holland 6/81) by 98 runs.

 

LEAVE A REPLY

Please enter your comment!
Please enter your name here

5 − 1 =