ಟೆಸ್ಟ್ ಕ್ರಿಕೆಟ್: ಬೆರಳು ತುಂಡಾದ ಬೌಲರ್ ಈಗ ವಿಶ್ವಕ್ಕೇ ನಂ.1

0
PC: Fox sports/Cricket Australia

ಬೆಂಗಳೂರು, ಫೆಬ್ರವರಿ 17: ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಐಸಿಸಿ ಟೆಸ್ಟ್ ಬೌಲಿಂಗ್ rankingನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ.

25 ವರ್ಷದ ಪ್ಯಾಟ್ ಕಮ್ಮಿನ್ಸ್ ಇದೇ ಮೊದಲ ಬಾರಿ ಐಸಿಸಿ ಟೆಸ್ಟ್ ಬೌಲಿಂಗ್ rankingನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ಪ್ಯಾಟ್ ಕಮ್ಮಿನ್ಸ್ ಅವರ ಬೌಲಿಂಗ್ ಕೈ, ಅಂದರೆ ಬಲಗೈನ ಮಧ್ಯದ ಬೆರಳಿಗೆ ತುದಿಯೇ ಇಲ್ಲ. ಬೆರಳು ತುಂಡಾದ ಬೌಲರ್ ಐಸಿಸಿ rankingನಲ್ಲಿ ಅಗ್ರಸ್ಥಾನಕ್ಕೇರಿರುವುದು ಅಸಾಮಾನ್ಯ ಸಾಧನೆಯೇ ಸರಿ.

ಪ್ಯಾಟ್ ಕಮ್ಮಿನ್ಸ್ 3 ವರ್ಷದ ಬಾಲಕನಾಗಿದ್ದಾಗ ಲಗೈನ ಮಧ್ಯದ ಬೆರಳಿನ ತುದಿ ತುಂಡಾಗಿತ್ತು. ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ವೆಬ್ ಸೈಟ್ ಗೆ ನೀಡಿದ್ದ ಸಂದರ್ಶನದಲ್ಲಿ ಪ್ಯಾಟ್ ಕಮ್ಮಿನ್ಸ್ ಮಾತನಾಡಿದ್ದರು.

ನನಗಾಗ 3 ರಿಂದ 4 ವರ್ಷ ವಯಸ್ಸು. ಮನೆಯಲ್ಲಿ ಆಟವಾಡುತ್ತಿದ್ದಾಗ ನನ್ನ ಅಕ್ಕ ಬಾಗಿಲನ್ನು ಜೋರಾಗಿ ತಳ್ಳಿದಳು. ನನ್ನ ಬಲಗೈನ ಮಧ್ಯರ ಬೆರಳು ಬಾಗಿಲಿನ ಸಂದಿಗೆ ಸಿಲುಕಿಕೊಂಡು ಬೆರಳಿನ ತುದಿಯೇ ತುಂಡಾಯಿತು. ಆದರೆ ಅದರಿಂದ ಬೌಲಿಂಗ್ ಮಾಡಲು ಏನೂ ಸಮಸ್ಯೆಯಾಗಲಿಲ್ಲ.
– ಪ್ಯಾಟ್ ಕಮ್ಮಿನ್ಸ್, ಆಸ್ಟ್ರೇಲಿಯಾದ ವೇಗದ ಬೌಲರ್

PC: Cricket Australia

ಆಸ್ಟ್ರೇಲಿಯಾ ಪರ 20 ಟೆಸ್ಟ್ ಪಂದ್ಯಗಳನ್ನಾಡಿರುವ ಪ್ಯಾಟ್ ಕಮ್ಮಿನ್ಸ್ 94 ವಿಕೆಟ್ಸ್ ಪಡೆದಿದ್ದಾರೆ. ಅಲ್ಲದೆ 42 ಏಕದಿನ ಪಂದ್ಯಗಳನ್ನಾಡಿ 65 ವಿಕೆಟ್ಸ್ ಹಾಗೂ 18 ಟಿ20 ಪಂದ್ಯಗಳಿಂದ 23 ವಿಕೆಟ್ಸ್ ಕಬಳಿಸಿದ್ದಾರೆ. ಐಸಿಸಿ ಬಿಡುಗಡೆಗೊಳಿಸಿರುವ ಟೆಸ್ಟ್ ಬೌಲಿಂಗ್ rankingನಲ್ಲಿ 878 ರೇಟಿಂಗ್ ಪಾಯಿಂಟ್ಸ್ ಗಳಿಸಿರುವ ಕಮ್ಮಿನ್ಸ್, ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಬ್ಯಾಟಿಂಗ್ rankingನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 922 ರೇಟಿಂಗ್ ಪಾಯಿಂಟ್ಸ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.

ಐಸಿಸಿ ranking: ಸಂಪೂರ್ಣ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here

one × one =