ಟೆಸ್ಟ್ ಪಂದ್ಯ ಗೆದ್ದ ಬೆನ್ನಲ್ಲೇ ಬ್ಯಾಟಿಂಗ್ ಅಭ್ಯಾಸಕ್ಕಿಳಿದ ಕೆ.ಎಲ್ ರಾಹುಲ್

0
ಟೀಮ್ ಇಂಡಿಯಾ ಓಪನರ್ ಕೆ.ಎಲ್ ರಾಹುಲ್ ಅವರ ಆಕರ್ಷಕ ಕವರ್ ಡ್ರೈವ್ @BCCI

ಅಡಿಲೇಡ್, ಡಿಸೆಂಬರ್ 10: ಭಾರತ ಕ್ರಿಕೆಟ್ ತಂಡ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯವನ್ನು 32 ರನ್ ಗಳಿಂದ ಗೆದ್ದುಕೊಂಡಿದೆ.

ಪಂದ್ಯ ಗೆದ್ದ ಬೆನ್ನಲ್ಲೇ ಆರಂಭಿಕ ಬ್ಯಾಟ್ಸ್ ಮನ್ ಕೆ.ಎಲ್ ರಾಹುಲ್ ನೆಟ್ಸ್ ಗೆ ಆಗಮಿಸಿ ಕೆಲ ಹೊತ್ತು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ತಂಡದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ಅಭ್ಯಾಸದಲ್ಲಿ ರಾಹುಲ್ ಅವರಿಗೆ ನೆರವಾದರು.

ಪ್ರಥಮ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಎಡವಿದ್ದ ರಾಹುಲ್ 2ನೇ ಇನ್ನಿಂಗ್ಸ್ ನಲ್ಲಿ 44 ರನ್ ಗಳಿಸಿದ್ದರು. ಸರಣಿಯ ದ್ವಿತೀಯ ಟೆಸ್ಟ್ ಪಂದ್ಯ ಡಿಸೆಂಬರ್ 14ರಂದು ಪರ್ತ್ ನಲ್ಲಿ ಆರಂಭವಾಗಲಿದೆ.

LEAVE A REPLY

Please enter your comment!
Please enter your name here

18 + 5 =