ಡಿಆರ್‌ಎಸ್- ಇದು ಧೋನಿ ರಿವ್ಯೂ ಸಿಸ್ಟಮ್!

0
PC: Twitter

ಬೆಂಗಳೂರು, ಸೆಪ್ಟೆಂಬರ್ 24: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಮೈದಾನದಲ ಮಾಸ್ಟರ್ ಮೈಂಡ್ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕ್ರೀಡಾಂಗಣದಲ್ಲಿ ಧೋನಿ ಬ್ರೈನ್ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದಕ್ಕೆ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಅದರಲ್ಲೂ ಅಂಪೈರ್ ಡಿಸಿಶನ್ ರಿವ್ಯೂ ಸಿಸ್ಟಮ್(ಡಿಆರ್‌ಎಸ್)ನಲ್ಲಿ ಧೋನಿ ಅವರದ್ದು 100% ಪಕ್ಕಾ ರಿಸಲ್ಟ್.


ಅಂಪೈರ್ ನಾಟೌಟ್ ಅಥವಾ ಔಟ್ ಎಂದು ತೀರ್ಪು ನೀಡಿದ ಸಂದರ್ಭದಲ್ಲಿ ಧೋನಿ ಡಿಆರ್‌ಎಸ್ ಮೊರೆ ಹೋದರೆ 3ನೇ ಅಂಪೈರ್ ಡಿಸಿಷನ್ ಟೀಮ್ ಇಂಡಿಯಾ ಪರವಾಗಿ ಬರುತ್ತದೆ. ಧೋನಿ ಲೆಕ್ಕಾಚಾರಗಳು ಅಷ್ಟು ಪಕ್ಕಾ ಆಗಿರುತ್ತವೆ. ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಇದು ಮತ್ತೊಮ್ಮೆ ಸಾಬೀತಾಗಿದೆ.


ಭಾನುವಾರ ನಡೆದ ಪಾಕ್ ವಿರುದ್ಧದ ಪಂದ್ಯದಲ್ಲಿ ಇಮಾಮ್ ಉಲ್ ಹಕ್, ಟೀಮ್ ಇಂಡಿಯಾ ಲೆಗ್‌ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರ ದಾಳಿಯಲ್ಲಿ ಎಲ್ಬಿಡಬ್ಲ್ಯು ಆಗಿದ್ದರು. ಆದರೆ ಅಂಪೈರ್ ನಾಟೌಟ್ ಎಂದು ತೀರ್ಪಿತ್ತರು. ಕೂಡಲೇ ಮನಸ್ಸಲ್ಲೇ ಲೆಕ್ಕಾಚಾರ ಹಾಕಿದ ಧೋನಿ, ಡಿಆರ್‌ಎಸ್ ತೆಗೆದುಕೊಳ್ಳುವಂತೆ ನಾಯಕ ರೋಹಿತ್ ಶರ್ಮಾಗೆ ಸೂಚಿಸಿದರು. ಧೋನಿ ಲೆಕ್ಕಾಚಾರ ಕೈಕೊಡಲಿಲ್ಲ. ರಿಪ್ಲೇನಲ್ಲಿ ನೋಡಿದಾಗ ಇಮಾಮ್ ಉಲ್ ಹಕ್ ಎಲ್ಬಿಡಬ್ಲ್ಯು ಆಗಿರುವುದು ಸ್ಪಷ್ಟವಾಗಿತ್ತು. ಇದೇ ಕಾರಣದಿಂದ ಡಿಆರ್‌ಎಸ್ ಅಂದ್ರೆ ಡಿಸಿಶನ್ ರಿವ್ಯೂ ಸಿಸ್ಟಮ್ ಅಲ್ಲ, ಧೋನಿ ರಿವ್ಯೂ ಸಿಸ್ಟಮ್ ಎಂಬದು ಕ್ರಿಕೆಟ್ ಪ್ರಿಯರ ಅಭಿಪ್ರಾಯ.

 

LEAVE A REPLY

Please enter your comment!
Please enter your name here

16 + 15 =