ಡಿಸೆಂಬರ್ 16ಕ್ಕೆ ಸೈನಾ ನೆಹ್ವಾಲ್-ಕಶ್ಯಪ್ ಮದುವೆ

0

ಬೆಂಗಳೂರು, ಸೆಪ್ಟೆಂಬರ್ 26: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಗಳಾದ ಸೈನಾನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ಡಿಸೆಂಬರ್ 6ರಂದು ಮದುವೆಯಾಗಲಿದ್ದಾರೆ.
ಈ ಬ್ಯಾಡ್ಮಿಂಟನ್ ಜೋಡಿ ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ತಮ್ಮ ಪ್ರೇಮ ಸಂಬಂಧವನ್ನು ಗೌಪ್ಯವಾಗಿ ಮುಂದುವರಿಸಿಕೊಂಡು ಬಂದಿತ್ತು. ಇದೀಗ ಇಬ್ಬರೂ ಗೃಹಸ್ಥಾಶ್ರಮಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ.

ಕುಟುಂಬ ಸದಸ್ಯರ ಸಮ್ಮುಖದಲ್ಲಿ ಡಿಸೆಂಬರ್ 16ರಂದು ಮದುವೆ ಹಾಗೂ ಡಿಸೆಂಬರ್ 21ರಂದು ಸ್ನೇಹಿತರು, ಹಿತೈಷಿಗಳಿಗಾಗಿ ಆರತಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಇದುವರೆಗೆ ತಾವಿಬ್ಬರೂ ಉತ್ತಮ ಸ್ನೇಹಿತರೆಂದು ಹೇಳಿಕೊಂಡೇ ಬಂದಿದ್ದ ಸೈನಾ ಹಾಗೂ ಕಶ್ಯಪ್ 2005ರಲ್ಲಿ ಗೋಪಿಚಂದ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುವ ಸಂದರ್ಭದಲ್ಲಿ ಮೊದಲು ಪರಸ್ಪರ ಭೇಟಿ ಮಾಡಿದ್ದರು.

LEAVE A REPLY

Please enter your comment!
Please enter your name here

16 − seven =