ಡಿಸೆಂಬರ್ 21 ರಿಂದ 18ನೇ ವಾಜಪೇಯಿ ಕಪ್ ವಾಲಿಬಾಲ್

0

ರಾಜಾಜಿನಗರದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಿಂದ 18 ನೇ ವರ್ಷದ ಪುರುಷರು ಮತ್ತು ಮಹಿಳೆಯರ ರಾಷ್ಟ್ರೀಯ ಮಟ್ಟದ ಆಲ್ ಇಂಡಿಯಾ ಸೌತ್ ಜೋನ್ ಯೂತ್ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ. ಹೊನಲು ಬೆಳಕಿನ “18ನೇ ವಾಜಪೇಯಿ ಕಪ್” ವಾಲಿಬಾಲ್ ಟೂರ್ನಿ ಇದೇ 21 ರಿಂದ 25ರವರೆಗೆ ಶಂಕರ ಮಠ ವೃತ್ತದ ವಿವೇಕಾನಂದ ಆಟದ ಮೈದಾನದಲ್ಲಿ ನಡೆಯಲಿದೆ. ಡಿಸೆಂಬರ್ 25 ರಂದು ರಾಷ್ಟ್ರ ಕಂಡ ಅಪ್ರತಿಮ ನಾಯಕ ಹಾಗೂ ದೇಶದ ಪ್ರತಿಭಾವಂತ ಪ್ರಧಾನಿಗಳಲ್ಲಿ ಶ್ರೇಷ್ಠರಾದ ಶ್ರೀ ಅಟಲ್ ಬಿಹಾರಿ ವಾಜಿಪೇಯಿ ಅವರ ಜನ್ಮದಿನದ ಅಂಗವಾಗಿ ಪ್ರತಿವರ್ಷ ವಾಲಿಬಾಲ್ ಪಂದ್ಯಾವಳಿ ಆಯೋಜಿಸಿಕೊಂಡು ಬರುತ್ತಿದ್ದು, 17 ವರ್ಷಗಳ ಕಾಲ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಈ ಬಾರಿಯ ಉದ್ಘಾಟನಾ ಸಮಾರಂಭದಲ್ಲಿ  ವಿಶೇಷವಾಗಿ ದೇಶೀಯ ಕಲೆಗಳಾದ ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ,ಕಂಸಾಳೆ,  ಯಕ್ಷಗಾನ ಒಳಗೊಂಡಂತೆ  ಹತ್ತು ಕಲಾ ತಂಡದಿಂದ ವಿಭಿನ್ನವಾದ ಪ್ರದರ್ಶನ ನೀಡಲಿದ್ದಾರೆ ಎಂದು  ಬಿಬಿಎಂಪಿ ಮಾಜಿ ಸದಸ್ಯ ಹಾಗೂ ಮಾಜಿ ಉಪ ಮೇಯರ್ ಎಸ್.ಹರೀಶ್ ಅವರ ಕನಸಿನ ಕೂಸಾಗಿರುವ ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಕ್ರೀಡಾ ಚಟುವಟಿಕೆಯನ್ನು ಪ್ರೋತ್ಸಾಹಿಸಿಕೊಂಡು ಬರುತ್ತಿದೆ.

ಶಾಲಾ ಮಟ್ಟದಿಂದ ಈಪಂದ್ಯಾವಳಿಯನ್ನು ಆರಂಭಿಸಲಾಗಿದ್ದು, ದಕ್ಷಿಣ ವಲಯ, ಇನ್ವಿಟೇಶನ್ ಕಪ್ ,ನ್ಯಾಷನಲ್ ಕಪ್, ರಾಜ್ಯ ಮಟ್ಟದ ಟೂರ್ನಿ, ಅಖಿಲ ಭಾರತ ಮಟ್ಟದ ಟೂರ್ನಿ, ಎ ಡಿವಿಷನ್ ಪಂದ್ಯಾವಳಿಗಳನ್ನು ಈವರೆಗೆ ಯಶಸ್ವಿಯಾಗಿ ನಡೆಸಲಾಗಿದೆ. ರಾಜ್ಯದ 12 ಪ್ರತಿಷ್ಠಿತ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು, ಎಲ್ಲಾ ವಿಭಾಗಗಳಲ್ಲಿ ಆಡಿ ಉತ್ತಮ ಪ್ರದರ್ಶನ ತೋರಿರುವ ಅತ್ಯುತ್ತಮ ತಂಡಗಳು ಭಾಗವಹಿಸಲಿವೆ.ಮಹಿಳೆಯರ 6, ಪುರುಷರ 6 ಈ ತಂಡಗಳು ಭಾಗವಹಿಸಲು ಅರ್ಹತೆ ಪಡೆದಿದೆ. ಈ ಪಂದ್ಯಾವಳಿಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಪಾಂಡಿಚೇರಿ, ಆಂಧ್ರಪ್ರದೇಶ, ತೆಲಂಗಾಣದ ಆರು ರಾಜ್ಯ ಮಟ್ಟದ ತಂಡಗಳು ಪ್ರವೇಶ ಪಡೆದಿವೆ. ಈ ಪಂದ್ಯಾವಳಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಈ ಹೊನಲು ಬೆಳಕಿನ ಪಂದ್ಯಾವಳಿಯನ್ನು ವೀಕ್ಷಿಸಲು ಉಚಿತ ಪ್ರವೇಶವಿದೆ. 5,000 ಜನ ಕುಳಿತು ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ.

ಈ ವಾಜಪೇಯಿ ಕಪ್ ಪಂದ್ಯಾವಳಿ ಉದ್ಘಾಟನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ ಸದಾನಂದ ಗೌಡ, ಪೂಜ್ಯ ಮಹಾಪೌರರಾದ ಎಂ ಗೌತಮ್ ಕುಮಾರ್ ಹಾಗೂ ಉಪ ಮುಖ್ಯಮಂತ್ರಿಗಳು,  ಸಚಿವರಾದ ಸುರೇಶ್ ಕುಮಾರ್ ಅವರು ಸಚಿವರುಗಳು, ಶಾಸಕರುಗಳು, ಹಾಗೂ ಪಾಲಿಕೆ ಸದಸ್ಯರುಗಳು ಪಾಲ್ಗೊಳ್ಳಲಿದ್ದಾರೆ. 21 ರಂದು ಸಂಜೆ 4ಗಂಟೆಗೆ. ವಾಜಪೇಯಿ ಕಪ್ ಗಾಗಿಯೇ ಈ ಬಾರಿ ವಿಶೇಷ ಥೀಮ್ ಸಾಂಗ್ ಸಿದ್ಧಪಡಿಸಲಾಗಿದ್ದು, ಥೀಮ್ ಸಾಂಗ್ ಗೆ ಆಕರ್ಷಕ ನೃತ್ಯ ಸಂಯೋಜನೆ ಸಹ ರೂಪಿಸಲಾಗಿದೆ. ಪ್ರತಿ ಸಂಜೆ ವಿಭಿನ್ನ ಮತ್ತು ವೈವಿಧ್ಯಮಯ ಸಾಂಸ್ಕತಿಕ ಕಾರ್ಯಕ್ರಮಗಳು ಸಹ ನಡೆಯಲಿವೆ ಎಂದು ಮಾಜಿ ಉಪಮಹಾಪೌರ ಹಾಗೂ ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿ ಸಂಘದ ಅಧ್ಯಕ್ಷ, ರಾಜ್ಯ ವಾಲಿಬಾಲ್ ಸಂಘದ ಉಪಾಧ್ಯಕ್ಷ ಎಸ್. ಹರೀಶ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

5 × two =