ಪ್ರೊ ಕಬಡ್ಡಿ: ತಮಿಳ್ ತಲೈವಾಸ್‌ಗೆ ಸೋಲುಣಿಸಿ ಬುಲ್ಸ್ ಶುಭಾರಂಭ

0

ಚೆನ್ನೈ, ಅಕ್ಟೋಬರ್ 10: ಅದ್ಭುತ ಆಟ ಪ್ರದರ್ಶಿಸಿದ ಬೆಂಗಳೂರು ಬುಲ್ಸ್ ತಂಡ ಆತಿಥೇಯ ತಮಿಳ್ ತಲೈವಾಸ್ ತಂಡವನ್ನು 48-37 ಅಂಕಗಳ ಅಂತರದಲ್ಲಿ ಸೋಲಿಸಿ 6ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಶುಭಾರಂಭ ಮಾಡಿದೆ.
ಜವಾಹರ್ ಲಾಲ್ ನೆಹರು ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬುಲ್ಸ್ ಆಟಗಾರರು, ಅಜಯ್ ಠಾಕೂರ್ ನಾಯಕತ್ವದ ತಮಿಳ್ ತಲೈವಾಸ್ ತಂಡವನ್ನು ಅವರದ್ದೇ ನೆಲದಲ್ಲಿ ಮಟ್ಟಹಾಕಿದರು. ಬುಲ್ಸ್ ಪರ ಯುವ ರೇಡರ್ ಪವನ್ ಶೆರಾವತ್ ಅಮೋಘ ದಾಳಿಗಳನ್ನು ನಡೆಸಿದರು. ಇದರೊಂದಿಗೆ ತಮಿಳ್ ತಲೈವಾಸ್ ತಂಡ ತವರು ನೆಲದಲ್ಲಿ ಸತತ 3 ಸೋಲುಗಳನ್ನು ಅನುಭವಿಸಿತು.

LEAVE A REPLY

Please enter your comment!
Please enter your name here

five + fourteen =