ತಾಕತ್ತಿದ್ರೆ ಸಿಕ್ಸರ್ ಬಾರಿಸು ನೋಡೋಣ, ರೋಹಿತ್‌ಗೆ ಸವಾಲ್ ಹಾಕಿದ ಆಸೀಸ್ ಕ್ಯಾಪ್ಟನ್..!

0
PC: BCCI

ಮೆಲ್ಬರ್ನ್, ಡಿಸೆಂಬರ್ 27: ಭಾರತ ಮತ್ತು ಆತಿಥೇಯ ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಸರಣಿಯಲ್ಲಿ ಆಟಗಾರರ ಸ್ಲೆಡ್ಜಿಂಗ್ ಮುಂದುವರಿಸಿದೆ.  ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೇಯ್ನ್, ಸಿಕ್ಸರ್ ಬಾರಿಸುವಂತೆ ಭಾರತದ ರೋಹಿತ್ ಶರ್ಮಾ ಅವರಿಗೆ ಸವಾಲ್ ಹಾಕಿದ್ದಾರೆ.

ಪಂದ್ಯದ 2ನೇ ದಿನ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಅವರನ್ನು ವಿಕೆಟ್ ಕೀಪರ್ ಟಿಮ್ ಪೇಯ್ನ್ ಪದೇ ಪದೇ ಕೆಣಕಿದರು. ರೋಹಿತ್ ಶರ್ಮಾರತ್ತ ಮಾತಿನ ಬೌನ್ಸರ್ ಗಳನ್ನು ಎಸೆದರು. ಇದಕ್ಕೆ ರೋಹಿತ್ ತಲೆ ಕೆಡಿಸಿಕೊಳ್ಳದೆ ಆಟ ಮುಂದುವರಿಸಿದಾಗ ಟಿಮ್ ಪೇಯ್ನ್ ಹೊಸ ಅಸ್ತ್ರ ಪ್ರಯೋಗಿಸಿದರು.

ರೋಹಿತ್ ಶರ್ಮಾ ಅವರನ್ನುದ್ದೇಶಿಸಿ ಪೇಯ್ನ್ ”ನಿನಗೆ ತಾಕತ್ತಿದ್ರೆ ಸಿಕ್ಸರ್ ಬಾರಿಸು, ನೀನು ಸಿಕ್ಸರ್ ಬಾರಿಸಿದರೆ ಆಸ್ಟ್ರೇಲಿಯಾ ಬಿಟ್ಟು ಮುಂಬೈಗೆ ಬಂದು ನೆಲೆಸುತ್ತೇನೆ” ಎಂದು ಸವಾಲು ಹಾಕಿದರು. ಇದಕ್ಕೆ ನಗುವೇ ರೋಹಿತ್ ಶರ್ಮಾ ಉತ್ತರವಾಗಿತ್ತು.

ತಾಳ್ಮೆಯ ಬ್ಯಾಟಿಂಗ್ ಪ್ರದರ್ಶನವಿತ್ತ ರೋಹಿತ್ ಶರ್ಮಾ 114 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ ಅಜೇಯ 63 ರನ್ ಗಳಿಸಿದರು. ಬ್ಯಾಟಿಂಗ್ ಗೆ ಕಠಿಣವಾಗಿರುವ ಪಿಚ್ ನಲ್ಲಿ ಭಾರತ ಪ್ರಥಮ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಗೆ 443 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದೆ.

ರೋಹಿತ್ ಶರ್ಮಾಗೆ ಟಿಮ್ ಪೇಯ್ನ್ ಹಾಕಿದ ಸವಾಲನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿLEAVE A REPLY

Please enter your comment!
Please enter your name here

8 + 10 =