ತಾಯಿಯ ಸಾವಿನ ನೋವಿನ ನಡುವೆಯೂ ಮೈದಾನಕ್ಕಿಳಿದ ವಿಂಡೀಸ್ ಕ್ರಿಕೆಟಿಗ..!

0
Windies Cricket ‏ Verified account PC: Twitter/ windiescricket

ಆಂಟಿಗಾ, ಫೆಬ್ರವರಿ 2: ವೆಸ್ಟ್ ಇಂಡೀಸ್ ತಂಡದ ಯುವ ವೇಗದ ಬೌಲರ್ ಅಲ್ಜಾರಿ ಜೋಸೆಫ್, ತಮ್ಮ ತಾಯಿಯ ಸಾವಿನ ನೋವಿನ ನಡುವೆಯೂ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಆಡಿದ್ದಾರೆ. ಆ ಮೂಲಕ ತಂಡಕ್ಕೆ ತಮ್ಮ ಬದ್ಧತೆ ಪ್ರದರ್ಶಿಸಿದ್ದಾರೆ.

ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 3ನೇ ದಿನದಾಟದ ಆರಂಭಕ್ಕೂ ಮೊದಲು ಅಲ್ಜಾರಿ ಜೋಸೆಫ್ ಅವರ ತಾಯಿ ಶಾರನ್ ಜೋಸೆಫ್ ನಿಧನರಾಗಿದ್ದರು. ತಾಯಿಯ ನಿಧನದಿಂದ ವಿಚಲಿತರಾದರೂ ಆಟದಲ್ಲಿ ಮುಂದುವರಿಯುವ ನಿರ್ಧಾರ ಕೈಗೊಳ್ಳುವ ಮೂಲಕ ಅಲ್ಜಾರಿ ಜೋಸೆಫ್ ತಮ್ಮ ಬದ್ಧತೆ ತೋರಿದರು.

22 ವರ್ಷದ ಅಲ್ಜಾರಿ ಜೋಸೆಫ್ ಪಂದ್ಯದ ಮೊದಲ ದಿನ ತಮ್ಮ ಪ್ರಥಮ ಎಸೆತದಲ್ಲೇ ಇಂಗ್ಲೆಂಡ್ ನಾಯಕ ಜೋ ರೂಟ್ ಅವರ ವಿಕೆಟ್ ಪಡೆದಿದ್ದರು. ಬಲಗೈ ವೇಗಿ ಅಲ್ಜಾರಿ ಜೋಸೆಫ್ 2016ರಲ್ಲಿ ಐಸಿಸಿ ಅಂಡರ್-19 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡದ ಸದಸ್ಯರಾಗಿದ್ದರು. ಇದುವರೆಗೆ 8 ಟೆಸ್ಟ್ ಪಂದ್ಯಗಳನ್ನಾಡಿರುವ ಜೋಸೆಫ್ 20 ವಿಕೆಟ್ ಪಡೆದಿದ್ದಾರೆ. ಅಲ್ಲದೆ 16 ಏಕದಿನ ಪಂದ್ಯಗಳಿಂದ 24 ವಿಕೆಟ್ ಕಬಳಿಸಿದ್ದಾರೆ.

LEAVE A REPLY

Please enter your comment!
Please enter your name here

four × four =