ತಾಯಿ ಹುಟ್ಟುಹಬ್ಬಕ್ಕೆ ಶತಕದ ಉಡುಗೊರೆ ನೀಡಿದ ಸಿಡ್ನಿ ಸಿಡಿಗುಂಡು..!

0

ಸಿಡ್ನಿ, ಜನವರಿ 4: ಟೀಮ್ ಇಂಡಿಯಾದ ಡ್ಯಾಶಿಂಗ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಭ್ ಪಂತ್ ತಮ್ಮ ತಾಯಿಯ ಹುಟ್ಟುಹಬ್ಬಕ್ಕೆ ಶತಕದ ಉಡುಗೊರೆ ನೀಡಿದ್ದಾರೆ.

ಶುಕ್ರವಾರ ರಿಷಭ್ ಪಂತ್ ತಾಯಿಯ ಜನ್ಮದಿನ. ವಿಶೇಷವೆಂದರೆ ಇದೇ ದಿನ ರಿಷಭ್ ಪಂತ್ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ್ದಾರೆ. ಆ ಮೂಲಕ ತಾಯಿಯ ಹುಟ್ಟುಹಬ್ಬಕ್ಕೆ ಶತಕದ ಗಿಫ್ಟ್ ನೀಡಿದ್ದಾರೆ. 

ಸಿಡ್ನಿಯಲ್ಲಿ ಕಾಂಗರೂಗಳ ದಾಳಿಯನ್ನು ಚಿಂದಿ ಉಡಾಯಿಸಿದ ಪಂತ್ 189 ಎಸೆತಗಳಲ್ಲಿ 15 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿೆದ ಅಜೇಯ 159 ರನ್ ಗಳಿಸಿದರು. ಇದು ಟೆಸ್ಟ್ ಕ್ರಿಕೆಟ್ ನಲ್ಲಿ 21 ವರ್ಷದ ರಿಷಭ್ ಪಂತ್ ಗಳಿಸಿದ 2ನೇ ಶತಕವಾಗಿದೆ.

LEAVE A REPLY

Please enter your comment!
Please enter your name here

2 × 1 =