ಥ್ರೋಬಾಲ್: ಆಲ್ ಸ್ಟಾರ್ಸ್ ಸ್ಪೋರ್ಟ್ಸ್ ಅಕಾಡೆಮಿ ಮಹಿಳಾ ತಂಡಕ್ಕೆ ಚಿನ್ನ

0

ಬೆಂಗಳೂರು, ನವೆಂಬರ್ 3: ಆಲ್ ಸ್ಟಾರ್ಸ್ ಸ್ಪೋರ್ಟ್ಸ್ ಅಕಾಡೆಮಿ ಮಹಿಳಾ ತಂಡ, ಏಷ್ಯನ್ ಥ್ರೋಬಾಲ್ ಫೆಡರೇಷನ್ ಆಶ್ರಯದಲ್ಲಿ ನಡೆದ ಇಂಟರ್ನ್ಯಾಷನಲ್ ಥ್ರೋಬಾಲ್ ಚಾಂಪಿಯನ್ಷಿಪ್ ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದೆ.

ಆಕರ್ಷ್ ಪಿ.ಎಂ. ಅವರ ತರಬೇತಿಯ ಬೆಂಗಳೂರು ಮೂಲದ ಆಲ್ ಸ್ಟಾರ್ಸ್ ಸ್ಪೋರ್ಟ್ಸ್ ಅಕಾಡೆಮಿ ತಂಡ ಫೈನಲ್ ನಲ್ಲಿ ಶ್ರೀಲಂಕಾ ತಂಡವನ್ನು 25-15, 25-17 ಅಂತರದಲ್ಲಿ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.

ಚಾಂಪಿಯನ್ಷಿಪ್ rankingನಲ್ಲಿ ಪುರುಷರ ತಂಡ 4ನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು. 4ರ ಘಟ್ಟಕ್ಕೆ ಪ್ರವೇಶಿಸುವ ಹಾದಿಯಲ್ಲಿ ಆಲ್ ಸ್ಟಾರ್ಸ್ ಸ್ಪೋರ್ಟ್ಸ್ ಅಕಾಡೆಮಿ ಪುರುಷರ ತಂಡ, ಮಲೇಷ್ಯಾ ಹಾಗೂ ಬಾಂಗ್ಲಾದೇಶ ವಿರುದ್ಧ ಗೆದ್ದಿತ್ತು.

LEAVE A REPLY

Please enter your comment!
Please enter your name here

twelve − six =