ದಕ್ಷಿಣ್ ಡೇರ್ rally: ಮುನ್ನಡೆ ಕಾಯ್ದುಕೊಂಡ ಗಿಲ್, 3ನೇ ಸ್ಥಾನದಲ್ಲಿ ಸಂದೀಪ್

0
Sandeep Sharma in action on Wednesday.

ದಾವಣಗೆರೆ, ಸೆಪ್ಟೆಂಬರ್ 5: ಉತ್ತಮ ಪ್ರದರ್ಶನ ಮುಂದುವರಿಸಿರುವ ಸಂದೀಪ್ ಶರ್ಮಾ, ಮಾರುತಿ ಸುಜುಕಿ ದಕ್ಷಿಣ್ ಡೇರ್ rallyಯ 4ನೇ ದಿನದಂತ್ಯಕ್ಕೆ 3ನೇ ಸ್ಥಾನಕ್ಕೆ ಜಿಗಿದಿದ್ದಾರೆ.

4ನೇ ಸ್ಥಾನದಿಂದ ದಿನದ ಸ್ಪರ್ಧೆ ಆರಂಭಿಸಿದ ಮಾರುತಿ ಸುಜುಕಿ ಮೋಟಾರ್ ಸ್ಪೋರ್ಟ್ ಡ್ರೈವರ್ ಸಂದೀಪ್, ತಮ್ಮ ಸಹ ಚಾಲಕ ಅನ್ಮೋಲ್ ರಾಂಪಾಲ್ ಅವರೊಂದಿಗೆ ಉತ್ತಮ ವೇಗ ಹಾಗೂ ನಿಯಂತ್ರಣದೊಂದಿಗೆ 5:18:19 ಗಂಟೆಗಳಲ್ಲಿ ದಿನವನ್ನು ಪೂರ್ತಿಗೊಳಿಸಿದರು.

ಮಹೀಂದ್ರ ರೇಸರ್ ಗೌರವ್ ಗಿಲ್ ತಮ್ಮ ಅಗ್ರಸ್ಥಾನವನ್ನು ಮುಂದುವರಿಸಿದ್ದಾರೆ. ನಾಲ್ಕು ವಿಶೇಷ ಹಂತಗಳಲ್ಲಿ ರಕ್ಷಣಾತ್ಮಕವಾಗಿ ಕಾರು ಚಲಾಯಿಸಿದ ಗಿಲ್ ಅಗ್ರಸ್ಥಾನವನ್ನು ಕಾಯ್ದುಕೊಂಡರು. 3 ಹಂತಗಳ ನಂತರ 4:59:45 ಗಂಟೆಗಳ ಟೈಮಿಂಗ್ ಹೊಂದಿದ ಗಿಲ್, ತಮ್ಮ ತಂಡದ ಮತ್ತೊಬ್ಬ ಡ್ರೈವರ್ ಫಿಲಿಪ್ಪೋಸ್ ಮಥಾಯ್(05:07:15) ಅವರಿಗಿಂತ 8 ನಿಮಿಷಗಳ ಮುನ್ನಡೆ ಸಾಸಿದರು. ಮಥಾಯ್ 2ನೇ ಸ್ಥಾನದಲ್ಲಿದ್ದಾರೆ.
ಬೈಕ್ ವಿಭಾಗದಲ್ಲಿ ಯುವ ಕುಮಾರ್ ಮತ್ತು ಆಕಾಶ್ ಐತಾಳ್ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿದ್ದು, ಜತಿನ್ ಜೈನ್ 3ನೇ ಸುತ್ತಿನ ಅಂತ್ಯಕ್ಕೆ 3ನೇ ಸ್ಥಾನದಲ್ಲಿದ್ದಾರೆ.

Results: Cars: 1. Gaurav Gill / Musa Sharif – 4:59:45 ; 2. Phillipos Mathai / PVS Moorthy – 5:07:15 ; 3. Sandeep Sharma / Anmol Rajput – 5:18:19
Bikes: 1. Yuva Kumar – 3:47:27 ; 2. Aakash – 3:49:55 ; 3. Jatin Jain – 3:51:26.

LEAVE A REPLY

Please enter your comment!
Please enter your name here

five − five =