ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೈನಾ ನೆಹ್ವಾಲ್ – ಪರುಪಳ್ಳಿ ಕಶ್ಯಪ್

0

ಮುಂಬೈ, ಡಿಸೆಂಬರ್ 14: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ಮುಂಬೈನಲ್ಲಿ ಶುಕ್ರವಾರ ಸಪ್ತಪದಿ ತುಳಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮದುವೆಯ ನಂತರ ಇಬ್ಬರೂ ಹಾರ ಬದಿಲಿಸಿಕೊಂಡಿರುವ ಚಿತ್ರವನ್ನು ಟ್ವೀಟ್ ಮಾಡಿದ್ದು, ”ನನ್ನ ಜೀವನದ ಅತ್ಯುತ್ತಮ ಜೋಡಿ” ಎಂದು ಇಬ್ಬರೂ ಬರೆದುಕೊಂಡಿದ್ದಾರೆ. 29 ವರ್ಷದ ಸೈನಾ ನೆಹ್ವಾಲ್ ಮತ್ತು 32 ವರ್ಷದ ಪರುಪಳ್ಳಿ ಕಶ್ಯಪ್ ಕಳೆದ 13 ವರ್ಷಗಳಿಂದ ಪರಿಚಿತರಾಗಿದ್ದು, 10 ವರ್ಷಗಳಿಂದ ಪ್ರೀತಿಸುತ್ತಿದ್ದರು. 2005ರಲ್ಲಿ ಹೈದರಾಬಾದ್ ನ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿಗಾಗಿ ಸೇರಿದಾಗ ಇಬ್ಬರ ಪರಸ್ಪರ ಮಧ್ಯೆ ಪರಿಚಯವಾಗಿತ್ತು.

ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಸೈನಾ-ಕಶ್ಯಪ್ ಜೋಡಿಗೆ ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಸಹಿತ ಹಲವರು ಶುಭಕೋರಿದ್ದಾರೆ.

ಡಿಸೆಂಬರ್ 16ರಂದು ಹೈದರಾಬಾದ್ ನಲ್ಲಿ ವಿವಾಹ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಮೆಗಾ ಸ್ಟಾರ್ ಚಿರಂಜೀವಿ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸಹಿತ ಹಲವಾರು ಗಣ್ಯರು ಭಾಗವಹಿಸುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here

four × 4 =