ದಿಲ್ಲಿ ಕ್ರಿಕೆಟ್ ತಂಡಕ್ಕೆ ಲ್ಯಾನ್ಸ್ ಕ್ಲೂಸ್ನೆರ್ ಕೋಚಿಂಗ್ ಸಲಹೆಗಾರ

0
PC: Twitter

ಹೊಸದಿಲ್ಲಿ, ಸೆಪ್ಟೆಂಬರ್ 4: ದಕ್ಷಿಣ ಆಫ್ರಿಕಾ ಕ್ರಿಕೆಟ್‌ನ ದಿಗ್ಗಜ ಆಲ್‌ರೌಂಡರ್ ಲ್ಯಾನ್ಸ್ ಕ್ಲೂಸ್ನೆರ್ 2018-19ನೇ ಸಾಲಿನಲ್ಲಿ ದಿಲ್ಲಿ ತಂಡದ ಕೋಚಿಂಗ್ ಸಲಹೆಗಾರನಾಗಿ ನೇಮಕಗೊಂಡಿದ್ದಾರೆ. ದಿಲ್ಲಿ ತಂಡದ ಮಾಜಿ ನಾಯಕ ಮಿಥುನ್ ಮನ್ಹಾಸ್, ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದಾರೆ.
‘‘ವಿಜಯ್ ಹಜಾರೆ ಟೂರ್ನಿ, ದೇವಧರ್ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗಳಿಗೆ ದಿಲ್ಲಿ ತಂಡದ ಕೋಚಿಂಗ್ ಸಲಹೆಗಾರರಾಗಿ ಲ್ಯಾನ್ಸ್ ಕ್ಲೂಸ್ನೆರ್ ಅವರನ್ನು ನೇಮಕ ಮಾಡಿದ್ದೇವೆ,’’ ಎಂದು ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ) ಅಧಕ್ಷ ರಜತ್ ಶರ್ಮಾ ತಿಳಿಸಿದ್ದಾರೆ.
47 ವರ್ಷದ ಲ್ಯಾನ್ಸ್ ಕ್ಲೂಸ್ನೆರ್ ವೇಗದ ಬೌಲಿಂಗ್ ಮತ್ತು ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾಗಿದ್ದ ಆಲ್ರೌಂಡರ್. 1999ರ ವಿಶ್ವಕಪ್ ಟೂರ್ನಿಯಲ್ಲಿ ಕ್ಲೂಸ್ನೆರ್ ಅಮೋಘ ಆಟವಾಡಿ ದಕ್ಷಿಣ ಆಫ್ರಿಕಾ ತಂಡ ಸೆಮಿಫೈನಲ್ ತಲುಪಲು ಕಾರಣರಾಗಿದ್ದರು. ದಕ್ಷಿಣ ಆಫ್ರಿಕಾ ಪರ 49 ಟೆಸ್ಟ್ ಪಂದ್ಯಗಳನ್ನಾಡಿರುವ ಕ್ಲೂಸ್ನೆರ್, 4 ಶತಕಗಳ ಸಹಿತ 1906 ರನ್ ಹಾಗೂ 80 ವಿಕೆಟ್‌ಗಳನ್ನು ಪಡೆದಿದ್ದಾರೆ. 171 ಏಕದಿನ ಪಂದ್ಯಗಳಿಂದ 3576 ರನ್ ಹಾಗೂ 192 ವಿಕೆಟ್‌ಗಳನ್ನು ಕ್ಲೂಸ್ನೆರ್ ಪಡೆದಿದ್ದಾರೆ.

LEAVE A REPLY

Please enter your comment!
Please enter your name here

three + 5 =