‘ದಿ ಗ್ರೇಟ್ ವಾಲ್’ಗೆ ಬಾರ್ಸಿಲೋನಾ ಜರ್ಸಿ ಗಿಫ್ಟ್ ಗೌರವ..!

0

ಬೆಂಗಳೂರು, ಏಪ್ರಿಲ್ 7: ಭಾರತೀಯ ಕ್ರಿಕೆಟ್ ನ ಮಹಾಗೋಡೆ ಎಂದೇ ಖ್ಯಾತಿ ಪಡೆದಿರುವ ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. 

ದಿ ಗ್ರೇಟ್ ವಾಲ್ ಆಫ್ ಇಂಡಿಯಾ ರಾಹುಲ್ ದ್ರಾವಿಡ್ ಅವರಿಗೆ ಸ್ಪೇನ್ ನ ಖ್ಯಾತ ಫುಟ್ಬಾಲ್ ಕ್ಲಬ್ ಬಾರ್ಸಿಲೋನಾ ಗೌರವ ಸಲ್ಲಿಸಿದೆ. ಶನಿವಾರ ಕ್ಯಾಂಪೇ ನೌನಲ್ಲಿ ನಡೆದ ಬಾರ್ಸಿಲೋನಾ ಮತ್ತು ಅಟ್ಲೆಟಿಕೊ ಮ್ಯಾಡ್ರಿಡ್ ನಡುವಿನ ಪಂದ್ಯದಲ್ಲಿ ಬಾರ್ಸಿಲೋನಾ 2-0 ಅಂತರದ ಗೆಲುವು ಸಾಧಿಸಿತು. ಬಾರ್ಸಿಲೋನಾ ಪರ ಸ್ಟಾರ್ ಆಟಗಾರ ಲಯನೆಲ್ ಮೆಸ್ಸಿ ಮತ್ತು ಲೂಯಿಸ್ ಸ್ವಾರೆಜ್ ಗೋಲು ಗಳಿಸಿದರು. ಈ ಪಂದ್ಯವನ್ನು ವೀಕ್ಷಿಸಿದ ದ್ರಾವಿಡ್ ನಂತರ ಬಾರ್ಸಿಲೋನಾ ಫುಟ್ಬಾಲ್ ಕ್ಲಬ್ ಅಧ್ಯಕ್ಷರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಹೆಸರಿನ ಜರ್ಸಿಯನ್ನು ದ್ರಾವಿಡ್ ಅವರಿಗೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ದ್ರಾವಿಡ್ ‘’ಇದೊಂದು ಶ್ರೇಷ್ಠ ಗೌರವ. ಮೆಸ್ಸಿ ಮತ್ತು ಸ್ವಾರೆಜ್ ಅವರಂತಹ ಆಟಗಾರರ ಆಟವನ್ನು ನೇರವಾಗಿ ವೀಕ್ಷಿಸಿರುವುದು ಸಂತಸ ತಂದಿದೆ’’ ಎಂದಿದ್ದಾರೆ. 

LEAVE A REPLY

Please enter your comment!
Please enter your name here

11 − 6 =