ಧೋನಿ- ಸಾಕ್ಷಿಯನ್ನು ಒಂದಾಗಿಸಿದ್ದು ರಾಬಿನ್ ಉತ್ತಪ್ಪ; ಇದು ಸಾಕ್ಷಿ ಬಿಚ್ಚಿಟ್ಟ ರಹಸ್ಯ..!

0

ಬೆಂಗಳೂರು, ನವೆಂಬರ್ 22: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಮತ್ತು ಸಾಕ್ಷಿ ಸಿಂಗ್ ಅವರ ಮದುವೆಯಾಗಿ 8 ವರ್ಷಗಳೇ ಕಳೆದಿವೆ. ಅವರಿಗೆ ಜೀವಾ ಎಂಬ ಹೆಸರಿನ 3 ವರ್ಷದ ಮಗಳೂ ಇದ್ದಾಳೆ. ಅಂದ ಹಾಗೆ, ಧೋನಿ ಮತ್ತು ಸಾಕ್ಷಿಯನ್ನು ಒಂದಾಗಿಸಿದ್ದು ನಮ್ಮ ಕರ್ನಾಟಕದ ಕ್ರಿಕೆಟಿಗ ರಾಬಿನ್ ಉತ್ತಪ್ಪ.
ಹೌದು. ಧೋನಿ ಮತ್ತು ಸಾಕ್ಷಿ ಅವರ ಮೊದಲ ಭೇಟಿಗೆ ಕಾರಣ ರಾಬಿನ್ ಉತ್ತಪ್ಪ. ಈ ಇಂಟ್ರೆಸ್ಟಿಂಗ್ ಸಂಗತಿಯನ್ನು ಸ್ವತಃ ಸಾಕ್ಷಿ ಅವರೇ ಇನ್ಸ್ ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸಾಕ್ಷಿ ಧೋನಿ ಸೋಮವಾರವಷ್ಟೇ 30ನೇ ವರ್ಷಕ್ಕೆ ಕಾಲಿಟ್ಟಿದ್ದರು. ಮುಂಬೈನಲ್ಲಿ ಸ್ನೇಹಿತರಿಗಾಗಿ ಬರ್ತ್ ಡೇ ಪಾರ್ಟಿಯನ್ನೂ ಆಯೋಜಿಸಿದ್ದರು. ಆ ಪಾರ್ಟಿಯಲ್ಲಿ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ರಾಬಿನ್ ಉತ್ತಪ್ಪ ಕೂಡ ಭಾಗವಹಿಸಿದ್ದರು.
ರಾಬಿನ್ ಉತ್ತಪ್ಪ ಮತ್ತು ಅವರ ಪತ್ನಿ ಶೀತಲ್ ಅವರೊಂದಿಗಿರುವ ಫೋಟೋವನ್ನು ಇನ್ಸ್ ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಸಾಕ್ಷಿ, ನಾನು ಮತ್ತು ಧೋನಿ ಒಂದಾಗಲು ರಾಬಿನ್ ಉತ್ತಪ್ಪ ಅವರೇ ಕಾರಣ ಎಂದು ಬರೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here

3 + 12 =