ನಾಳೆಯಿಂದ ಬೆಂಗಳೂರಲ್ಲಿ ಮಹಿಳಾ ಟಿ20 ಲೀಗ್…ವೇದಾ ಸ್ಟಾರ್ ಅಟ್ರಾಕ್ಷನ್..!

0

ಬೆಂಗಳೂರು, ಆಗಸ್ಟ್ 2: ಮಹಿಳಾ ಕ್ರಿಕೆಟ್ ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಬಿಸಿಸಿಐ ಈಗಾಗಲೇ ಐಪಿಎಲ್ ಮಾದರಿಯಲ್ಲಿ ಮಹಿಳಾ ಟಿ20 ಚಾಲೆಂಜ್ ಟೂರ್ನಿಯನ್ನು ಆರಂಭಿಸಿದೆ. ಈಗಾಗಲೇ 2018 ಮತ್ತು 2019ರ ಐಪಿಎಲ್ ಟೂರ್ನಿಗಳ ಮಧ್ಯದಲ್ಲಿ ಮಹಿಳಾ ಟಿ20 ಚಾಲೆಂಜ್ ಟೂರ್ನಿಯನ್ನೂ ಆಯೋಜಿಸಲಾಗಿದೆ.

ಇದೀಗ ಉದ್ಯಾನ ನಗರಿ ಬೆಂಗಳೂರಿನಲ್ಲಿ ವಿಭಿನ್ನ ಮಾದರಿಯ ಮಹಿಳಾ ಟಿ20 ಲೀಗ್ ಶುರುವಾಗಲಿದೆ. ಬೆಂಗಳೂರು ಮೂಲದ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಾಗಿರುವ ಓಸೀನ್ ವೈಬ್ರೆನ್ಸ್ ಆಯೋಜಕತ್ವದಲ್ಲಿ ನಡೆಯಲಿರುವ ಈ ಟೂರ್ನಿ ನಾಳೆ ಆರಂಭವಾಗಲಿದ್ದು, ಆಗಸ್ಟ್ 8ರವರೆಗೆ ನಡೆಯಲಿದೆ. ಕರ್ನಾಟಕದ ಸ್ಟಾರ್ ಅಂತರಾಷ್ಟ್ರೀಯ ಆಟಗಾರ್ತಿಯರಾದ ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕ್ವಾಡ್, ರಾಜ್ಯದ ಸ್ಟಾರ್ ಆಟಗಾರ್ತಿಯರಾದ ದಿವ್ಯಾ ಜ್ಞಾನಾನಂದ್, ಆಕಾಂಕ್ಷಾ ಕೊಹ್ಲಿ, ರಕ್ಷಿತಾ ಕೃಷ್ಣಪ್ಪ, ಸಿ.ಪ್ರತ್ಯೂಷಾ ಸಹಿತ ಹಲವು ಆಟಗಾರ್ತಿಯರು ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.

ಟೀಮ್ ನರ್ಮದಾ, ಟೀಮ್ ಸಿಂಧು, ಟೀಮ್ ಕಾವೇರಿ ಮತ್ತು ಟೀಮ್ ಯಮುನಾ ತಂಡಗಳು ಟೂರ್ನಿಯಲ್ಲಿ ಆಡಲಿದ್ದು, ಪಂದ್ಯಗಳು ಸಂಪ್ರಸಿದ್ಧಿ ಸ್ಪೋರ್ಟ್ಸ್ ಎಸ್ಟಾಡಿಯೊ ಮೈದಾನದಲ್ಲಿ ನಡೆಯಲಿವೆ.

 

ಮಹಿಳಾ ಟಿ20 ಲೀಗ್: ವೇಳಾಪಟ್ಟಿ

ಆಗಸ್ಟ್ 4: ಟೀಮ್ ನರ್ಮದಾ Vs ಟೀಮ್ ಯಮುನಾ (9.30AM), ಟೀಮ್ ಸಿಂಧು Vs ಟೀಮ್ ಕಾವೇರಿ (1.30 PM)

ಆಗಸ್ಟ್ 5: ಟೀಮ್ ನರ್ಮದಾ Vs ಟೀಮ್ ಕಾವೇರಿ (9.30AM), ಟೀಮ್ ಸಿಂಧು Vs ಟೀಮ್ ಯಮುನಾ (1.30 PM)

ಆಗಸ್ಟ್ 6: ಟೀಮ್ ನರ್ಮದಾ Vs ಟೀಮ್ ಸಿಂಧು (9.30AM), ಟೀಮ್ ಕಾವೇರಿ Vs ಟೀಮ್ ಯಮುನಾ (1.30 PM)

ಆಗಸ್ಟ್ 8: ಫೈನಲ್ಸ್

ತಂಡಗಳ ವಿವರ

ಟೀಮ್ ನರ್ಮದಾ: ರಕ್ಷಿತಾ ಕೃಷ್ಣಪ್ಪ, ಸಿ.ಪ್ರತ್ಯೂಷಾ, ಸಂಜವಾ ಭಾಟ್ನಿ(ವಿಕೆಟ್ ಕೀಪರ್), ಸಂಜನಾ ರಾಜ್, ಅಕ್ಷತಾ, ಶಿಶಿರಾ ಗೌಡ, ನಿಕ್ಕಿ ಪ್ರಸಾದ್, ಆಕಾಂಕ್ಷಾ ಕೊಹ್ಲಿ, ಹೇಮಾಂಜಲಿ, ಚೈತ್ರಾ, ಸ್ನೇಹಾ ಜಗದೀಶ್, ಸಾಧ್ವಿ ಸಂಜಯ್, ಪೂಜಾ ಕುಮಾರಿ.

ಟೀಮ್ ಸಿಂಧು: ದಿವ್ಯಾ ಜ್ಞಾನಾನಂದ್, ಚಾಂದಸಿ, ಕರುಣಾ ಜೈನ್(ವಿಕೆಟ್ ಕೀಪರ್), ಚಂದು ವಿ., ಚೇತನಾ.ಬಿ., ಶುಭಾ ಸತೀಶ್, ಕೃಷಿಕಾ ರೆಡ್ಡಿ, ಪುಷ್ಪಾ ಕೆ., ಆದಿಶ್ರೀ.ಸಿ., ವಂದನಾ ಎಂ., ಪೂಜಾ.ಡಿ., ಮಿಥಿಲಾ ವಿನೋದ್, ಮೋನಿಶಾ ಗೌಡ, ಪ್ರಕೃತಿ.

ಟೀಮ್ ಕಾವೇರಿ: ವೇದಾ ಕೃಷ್ಣಮೂರ್ತಿ, ರೀಮಾ ಎಫ್., ಸೌಮ್ಯಾ ವರ್ಮಾ(ವಿಕೆಟ್ ಕೀಪರ್), ಅದಿತಿ ಆರ್., ರಾಜೇಶ್ವರಿ ಗಾಯಕ್ವಾಡ್, ಶುಭಶ್ರೀ, ಪ್ರೇರಣಾ, ಮೋನಿಕಾ ಪಟೇಲ್, ಸಿಮ್ರೆನ್ ಹೆನ್ರಿ, ನಗ್ಮಾ, ಸವಿ, ಅನನ್ಯಾ ಸುಬಾಷ್, ಸೌಂದರ್ಯ, ಅದಿತಿ ಮಾನೆ, ಸೌಮ್ಯಾ.

ಟೀಮ್ ಯಮುನಾ: ವನಿತಾ ವಿ.ಆರ್., ರಕ್ಷಿತಾ ನಾಯಕ, ನೇತ್ರಾವತಿ(ವಿಕೆಟ್ ಕೀಪರ್), ರಾಮೇಶ್ವರಿ ಗಾಯಕ್ವಾಡ್, ಸಹನಾ ಪವಾರ್, ರೋಷನಿ ಕಿರಣ್, ದೇಬಸ್ಮಿತಾ, ಶ್ರದ್ಧಾ, ಧನ್ಯಾ ಗೌಡ, ಸೌಮ್ಯಾ ಎಂ., ಚಾಹೆಲ್ ಚೋಪ್ರಾ, ಮಲ್ಲಿಕಾ, ವೃಂದಾ, ಹರ್ಷಿತಾ ಶೇಖರ್, ವಿನಿತಾ ಶಿವಮೊಗ್ಗ.

LEAVE A REPLY

Please enter your comment!
Please enter your name here

nine − eight =