ನೆಟ್‌ಬಾಲ್ ಚಾಂಪಿಯನ್‌ಷಿಪ್: ಕರ್ನಾಟಕ ತಂಡಗಳಿಗೆ ಬೆಳ್ಳಿ ಪದಕ

0

ಬೆಂಗಳೂರು, ನವೆಂಬರ್ ೨೨: ಕರ್ನಾಟಕದ ಪುರುಷರ ಹಾಗೂ ಮಹಿಳೆಯರ ತಂಡಗಳು, ೧೨ನೇ ದಕ್ಷಿಣ ವಲಯ ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿವೆ. ಈ ಚಾಂಪಿಯನ್‌ಷಿಪ್ ನವೆಂಬರ್ ೨೦ ಮತ್ತು ೨೧ರಂದು ತ್ರಿಶ್ಯೂರ್‌ನ ಡಾನ್ ಬಾಸ್ಕೊ ಎಚ್‌ಎಸ್‌ಎಸ್ ಇನ್ಸ್‌ಟಿಟ್ಯೂಟ್‌ನಲ್ಲಿ ನಡೆದಿತ್ತು.

ಫೈನಲ್ ಪಂದ್ಯದಲ್ಲಿ ಕರ್ನಾಟಕದ ಪುರುಷರ ತಂಡ ಕೇರಳ ವಿರುದ್ಧ ೧೮-೨೪ ಅಂಕಗಳಿಂದ ಸೋಲುಂಡಿತು. ಇದಕ್ಕೂ ಮೊದಲು ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡ ತಮಿಳುನಾಡು ತಂಡವನ್ನು ೨೮-೨೦ ಅಂಕಗಳಿಂದ ಸೋಲಿಸಿ ಫೈನಲ್ ತಲುಪಿತ್ತು.

ಮಹಿಳಾ ವಿಭಾಗದ ಫೈನಲ್‌ನಲ್ಲಿ ರಾಜ್ಯದ ವನಿತೆಯರು ಕೇರಳ ವಿರುದ್ಧ ೨೪-೨೧ರ ಅಂತರದಲ್ಲಿ ವೀರೋಚಿತ ಸೋಲು ಕಂಡು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು. ಸೆಮಿಫೈನಲ್‌ನಲ್ಲಿ ಕರ್ನಾಟಕದ ಮಹಿಳಾ ತಂಡ ತೆಲಂಗಾಣ ವಿರುದ್ಧ ೧೯-೬ ಅಂಕಗಳ ಸುಲಭ ಜಯ ದಾಖಲಿಸಿತ್ತು.

LEAVE A REPLY

Please enter your comment!
Please enter your name here

thirteen + five =