ಪತ್ನಿ ಸಾಕ್ಷಿ ಕಾಲಿಗೆ ಚಪ್ಪಲಿ ತೊಡಿಸಿದ ಎಂ.ಎಸ್ ಧೋನಿ..!

0

ಬೆಂಗಳೂರು, ಡಿಸೆಂಬರ್ 16: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕ್ರಿಕೆಟ್ ಜಗತ್ತು ಕಂಡ ಗ್ರೇಟ್ ಫಿನಿಶರ್ ಮಹೇಂದ್ರ ಸಿಂಗ್ ಧೋನಿ ಶ್ರೇಷ್ಠ ಕ್ರಿಕೆಟಿಗ ಮಾತ್ರ ಅಲ್ಲ, ಹೆಂಡತಿಗೆ ತಕ್ಕ ಗಂಡ ಕೂಡ ಹೌದು. 

ಇಡೀ ಜಗತ್ತೇ ಮೆಚ್ಚುವ ಆಟಗಾರ ಧೋನಿ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಪತ್ನಿ ಸಾಕ್ಷಿ ಅವರ ಕಾಲಿಗೆ ಚಪ್ಪಲಿ ತೊಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಚಿತ್ರಗಳನ್ನು ಸ್ವತಃ ಸಾಕ್ಷಿ ತಮ್ಮ ಇನ್ಸ್ ಟಾಗ್ರಾಂನಲ್ಲಿ ಪ್ರಕಟಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಧೋನಿ ತಮ್ಮ ಕಾಲಿಗೆ ಚಪ್ಪಲಿ ತೊಡಿಸುತ್ತಿರುವ ಕೆಲ ಚಿತ್ರಗಳನ್ನು ಪ್ರಕಟಿಸಿರುವ ಸಾಕ್ಷಿ ‘’ನೀವು ಕೊಡಿಸಿದ ಶೂಗಳು. ಹೀಗಾಗಿ ನೀವೇ ತೊಡಿಸಬೇಕು’’ ಎಂದು ಬರೆದುಕೊಂಡಿದ್ದಾರೆ. 

LEAVE A REPLY

Please enter your comment!
Please enter your name here

20 + twelve =