ಪರ್ತ್ ಟೆಸ್ಟ್: ಅಂಪೈರ್ ಬ್ಲಂಡರ್, ಕಾಂಗರೂಗಳ ಮೋಸದಾಟಕ್ಕೆ ಕೊಹ್ಲಿ ಬಲಿ

0

ಪರ್ತ್, ಡಿಸೆಂಬರ್ 16: ಪರ್ತ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕಾಂಗರೂಗಳ ಮೋಸದಾಟಕ್ಕೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಔಟಾಗಿದ್ದಾರೆ.

ಪಂದ್ಯದ 3ನೇ ದಿನವಾದ ಭಾನುವಾರ 123 ರನಾ ಗಳಿಸಿ ಆಡುತ್ತಿದ್ದ ವಿರಾಟ್ ಕೊಹ್ಲಿ, ವೇಗಿ ಪ್ಯಾಟೇ ಕಮಿನ್ಸ್ ಫುಲ್ ಲೆಂತ್ ಎಸೆತವನ್ನು ಕವರ್ಸ್ ಕಡೆ ಡ್ರೈವ್ ಮಾಡಲು ಯತ್ನಿಸಿದಾಗ ಬ್ಯಾಟ್ ನ ಹೊರ ಅಂಚಿಗೆ ಬಡಿದ ಚೆಂಡು 2ನೇ ಸ್ಲಿಪ್ ನತ್ತ ಚಿಮ್ಮಿತು. ಸ್ಲಿಪ್ ನಲ್ಲಿದ್ದ ಪೀಟರ್ ಹ್ಯಾಂಡ್ಸ್ ಕಾಂಬ್ ಕ್ಯಾಚ್ ಪಡೆಯುವ ಸಂದರ್ಭದಲ್ಲಿ ಚೆಂಡು ನೆಲವನ್ನು ಸ್ಪರ್ಶಿಸಿದ್ದು ಟಿವಿ ರಿಪ್ಲೇನಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಆದರೆ ಪೀಟರ್ ಹ್ಯಾಂಡ್ಸ್ ಕಾಂಬ್ ಮಾತ್ರ ಔಟೆಂದು ಅಂಪೈರ್ ಕಡೆ ಸನ್ನೆ ಮಾಡಿದರು.

ಫೀಲ್ಡ್ ಅಂಪೈರ್ ಕುಮಾರ ಧರ್ಮಸೇನ ತೀರ್ಪನ್ನು ಟಿವಿ ಅಂಪೈರ್ ಗೆ ರವಾನಿಸಿದರು. ಟಿವಿ ಅಂಪೈರ್ ನೈಜಲ್ ಲಾಂಗ್ ಔಟ್ ತೀರ್ಪಿತ್ತಾಗ ವಿರಾಟ್ ಕೊಹ್ಲಿ ಅಸಮಾಧಾನ ಹೊರ ಹಾಕುತ್ತಾ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.

ಅಂಪೈರ್ ತೀರ್ಪಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. 

LEAVE A REPLY

Please enter your comment!
Please enter your name here

2 × 3 =