ಪರ್ತ್ ಟೆಸ್ಟ್: ಕುಸಿದ ಭಾರತಕ್ಕೆ ವಿರಾಟ್, ಅಜಿಂಕ್ಯ ಆಸರೆ

0

ಪರ್ತ್, ಡಿಸೆಂಬರ್ 15: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಪರ್ತ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ಅಜಿಂಕ್ಯ ರಹಾನೆ ಅಜೇಯ ಅರ್ಧಶತಕಗಳೊಂದಿಗೆ ಆಸರೆಯಾಗಿದ್ದಾರೆ.

PC: BCCI

ಪಂದ್ಯದ ದ್ವಿತೀಯ ದಿನವಾದ ಶನಿವಾರ 6 ವಿಕೆಟ್ ಗೆ 277 ರನ್ ಗಳಿಂದ ಆಟ ಮುಂದುವರಿಸಿದ ಆಸ್ಟ್ರೇಲಿಯಾ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ 326 ರನ್ನಿಗೆ ಆಲೌಟಾಯಿತು. 

ನಂತರ ತನ್ನ ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಭಾರತ, 8 ರನ್ ಗಳಿಸುವಷ್ಟರಲ್ಲಿ ಆರಂಭಿಕರಾದ ಮುರಳಿ ವಿಜಯ್(0) ಮತ್ತು ಕೆ.ಎಲ್ ರಾಹುಲ್(2) ಇಬ್ಬರನ್ನೂ ಕಳೆದುಕೊಂಡಿತು. ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ವಿಜಯ್ ಕ್ಲೀನ್ ಬೌಲ್ಡಾದರೆ, ವೇಗಿ ಜೋಶ್ ಹೇಜಲ್ ವುಡ್ ಅವರ ಅದ್ಭುತ ಯಾರ್ಕರ್ ಎಸೆತಕ್ಕೆ ರಾಹುಲ್ ಬೌಲ್ಡಾದರು.

ಪ್ರಥಮ ಟೆಸ್ಟ್ ನ ಶತಕವೀರ ಚೇತೇಶ್ವರ್ ಪೂಜಾರ(24) ಕೂಡ ಸ್ಟಾರ್ಕ್ ದಾಳಿಯಲ್ಲಿ ವಿಕೆಟ್ ಕೀಪರ್ ಟಿಮ್ ಪೇಯ್ನ್ ಗೆ ಕ್ಯಾಚಿತ್ತರು.

ಹೀಗೆ 82 ರನ್ನಿಗೆ 3 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ಅಜಿಂಕ್ಯ ರಹಾನೆ ಆಸರೆಯಾದರು. ಆಸೀಸ್ ದಾಳಿಗೆ ಸಡ್ಡು ಹೊಡೆದ ಕೊಹ್ಲಿ ಮತ್ತು ರಹಾನೆ ಮುರಿಯದ 4ನೇ ವಿಕೆಟ್ ಗೆ 90 ರನ್ ಸೇರಿಸಿದರು. ಜವಾಬ್ದಾರಿಯುತ ಆಟವಾಡಿದ ಕೊಹ್ಲಿ ಅಜೇಯ 82 ರನ್ ಗಳಿಸಿದ್ದು, 25ನೇ ಟೆಸ್ಟ್ ಶತಕದತ್ತ ದಾಪುಗಾಲಿಟ್ಟಿದ್ದಾರೆ. ಅಜಿಂಕ್ಯ ರಹಾನೆ 51 ರನ್ ಗಳೊಂದಿಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿರುವ ಭಾರತ ಇನ್ನೂ 154 ರನ್ ಗಳ ಹಿನ್ನಡೆಯಲ್ಲಿದೆ.

Brief scores

Australia: 326 all out in 108.3 overs (Marcus Harris 70, Aaron Finch 50, Travis Head 58; Ishant Sharma 4/41, Jaspreet Bumrah 2/53, Umesh Yadav 2/78, Hanuma Vihari 2/53).

India: 172/3 in 69 overs (Virat Kohli 82 not out, Ajinkya Rahane 51 not out; Mitchel Starc 2/42, Josh Hazlewood 1/50).

LEAVE A REPLY

Please enter your comment!
Please enter your name here

eight + ten =