ಪರ್ತ್ ಟೆಸ್ಟ್: 25ನೇ ಟೆಸ್ಟ್ ಶತಕ ಸಿಡಿಸಿದ ಕಿಂಗ್ ಕೊಹ್ಲಿ

0

ಪರ್ತ್, ಡಿಸೆಂಬರ್ 16: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪರ್ತ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ.
ದ್ವಿತೀಯ ದಿನದಂತ್ಯಕ್ಕೆ 82 ರನ್ ಗಳಿಸಿ ಅಜೇಯರಾಗುಳಿದಿದ್ದ ಕಿಂಗ್ ಕೊಹ್ಲಿ, 3ನೇ ದಿನ ಶತಕ ದಾಖಲಿಸಿದರು. ಇದು ಟೆಸ್ಟ್ ಕ್ರಿಕೆಟ್ ನಲ್ಲಿ ವಿರಾಟ್ ದಾಖಲಿಸಿದ 25ನೇ ಹಾಗೂ ಆಸ್ಟ್ರೇಲಿಯಾ ನೆಲದಲ್ಲಿ ಗಳಿಸಿದ 6ನೇ ಟೆಸ್ಟ್ ಶತಕವಾಗಿದೆ.

 

PC: BCCI

ಚೆಂಡು ಪುಟಿದೆದ್ದು ಬರುತ್ತಿದ್ದ ಅತ್ಯಂತ ಸವಾಲಿನ ಸನ್ನಿವೇಶದಲ್ಲಿ ಕೆಚ್ಚೆದೆಯ ಇನ್ನಿಂಗ್ಸ್ ಕಟ್ಟಿದ ಕೊಹ್ಲಿ, ತಮ್ಮ ವೃತ್ತಿಜೀವನದ ಶ್ರೇಷ್ಠ ಶತಕವನ್ನು ಪರ್ತ್ ನಲ್ಲಿ ಸಿಡಿಸಿದರು. 8 ರನ್ ಗಳಿಗೆ 2 ವಿಕೆಟ್ ಬಿದ್ದಿದ್ದ ಸಂದರ್ಭದಲ್ಲಿ ಕ್ರೀಸ್ ಗಿಳಿದಿದ್ದ ಕಿಂಗ್ ಕೊಹ್ಲಿ, 257 ಎಸೆತಗಳನ್ನೆದುರಿಸಿ 13 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 123 ರನ್ ಗಳಿಸಿ ಔಟಾದರು.
ಆಸ್ಟ್ರೇಲಿಯಾದಲ್ಲಿ 6ನೇ ಟೆಸ್ಟ್ ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಭಾರತೀಯ ದಾಖಲೆಯನ್ನು ಸರಿಗಟ್ಟಿದರು. ಸಚಿನ್ ಆಸ್ಟ್ರೇಲಿಯಾದಲ್ಲಿ ಆಡಿದ 20 ಟೆಸ್ಟ್ ಪಂದ್ಯಗಳಲ್ಲಿ 6 ಶತಕಗಳನ್ನು ಗಳಿಸಿದ್ದರೆ, ಕೊಹ್ಲಿ 10 ಟೆಸ್ಟ್ ಪಂದ್ಯಗಳಿಂದ ಈ ಸಾಧನೆ ಮಾಡಿದ್ದಾರೆ. ಅಲ್ಲದೆ ಈ ವರ್ಷ ವಿರಾಟ್ ಕೊಹ್ಲಿ ಬಾರಿಸಿದ 5ನೇ ಟೆಸ್ಟ್ ಶತಕ ಇದಾಗಿದೆ.

LEAVE A REPLY

Please enter your comment!
Please enter your name here

4 × four =